ಕೋವಿಡ್ ಜಾಗೃತಿಯಲ್ಲಿ ಕೋತಿ!

HBL 23KWR1
Published on

ದಾಂಡೇಲಿ: ಕೋತಿಯೊಂದು ಕೋವಿಡ್ ಜಾಗೃತಿ ಪ್ರಚಾರದಲ್ಲಿ ರಾಯಭಾರಿಯಂತೆ ತೊಡಗಿಕೊಂಡಿದೆ. ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್​ವಿುಲ್ ವ್ಯಾಪ್ತಿಯಲ್ಲಿ ಕರೊನಾ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಕಾರ್ಖಾನೆಯಿಂದ ಬುಲೆರೊ ವಾಹನದಲ್ಲಿ ಮೈಕ್ ಮೂಲಕ ಪ್ರಚಾರ ನಡೆಸಲಾಗಿತ್ತು.

ಕೋತಿ ವಾಹನದ ಮೇಲೆ ಬಂದು ಕುಳಿತು ಸುಮಾರು ಅರ್ಧ ಕಿಮೀ ಸಂಚರಿಸಿದೆ. ರಾಮ ಮಂದಿರದವರೆಗೂ ಬಂದು ನಂತರ ಇಳಿದು ಹೋಗಿದೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದು, ಅದು ಸಾಕಷ್ಟು ವೈರಲ್ ಆಗಿದೆ. ಕಳೆದ ತಿಂಗಳು ಗಾಯಗೊಂಡ ಕೋತಿಯೊಂದು ದಾಂಡೇಲಿಯ ಕ್ಲಿನಿಕ್​ಗೆ ಬಂದು ಚಿಕಿತ್ಸೆ ಪಡೆದು ಸುದ್ದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net