ಕೊಳಕ್ಕೆ ವಿಷ ಹಾಕಿದ ದುಷ್ಕರ್ಮಿಗಳು

ಕಿಡಿಗೇಡಿಗಳ ಕೃತ್ಯದಿಂದಾಗಿ ಮೃತಪಟ್ಟಿರುವ ಮೀನುಗಳು.
IMG-20230411-WA0033
Published on

ಬೈಲಕುಪ್ಪೆ: ಕಿಡಿಗೇಡಿಗಳು ಕೊಳಕ್ಕೆ ವಿಷ ಹಾಕಿದ ಕಾರಣ ನೂರಾರು ಮೀನು ಮರಿಗಳು ಮೃತಪಟ್ಟಿರುವ ಘಟನೆ ಬೈಲಕುಪ್ಪೆ ಹಳೇಊರು ಗ್ರಾಮದಲ್ಲಿ ನಡೆದಿದೆ.


ಗ್ರಾಮದ ಮಂಜುನಾಥ ಎಂಬುವರು ಜಮೀನಿನಲ್ಲಿ ಮೀನಿನ ಕೊಳ ಮಾಡಿದ್ದರು. ಕೆಲವು ವರ್ಷಗಳಿಂದ ಮೀನು ಮರಿ ಸಾಕಿ ಜೀವನ ನಿರ್ವಹಿಸುತ್ತಿದ್ದರು. ಕೊಳಕ್ಕೆ ದುಷ್ಕರ್ಮಿಗಳು ವಿಷ ಹಾಕಿದ ಕಾರಣ ಮಂಗಳವಾರ ನೂರಾರು ಮೀನು ಮರಿಗಳು ಸತ್ತು ತೇಲುತ್ತಿದ್ದವು. ಮಂಜುನಾಥ ತಕ್ಷಣ ಅಲ್ಲಿದ್ದ ನೀರನ್ನು ಖಾಲಿ ಮಾಡಿ ಶುದ್ಧ ನೀರನ್ನು ತುಂಬಿಸಿ, ಉಳಿದ ಮೀನು ಮರಿಗಳನ್ನು ಸಂರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net