ಮಂಗಳೂರು: ಬಂಟ್ವಾಳದಲ್ಲಿ ಶುಕ್ರವಾರ ನಡೆದ ಉಮ್ಮರ್ ಫಾರೂಕ್ ಕೊಲೆ ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದಾಗ ಗುಂಡ್ಯದಲ್ಲಿ ಅವರನ್ನು ಹಿಡಿಯಲು ಯತ್ನಿಸಿದ ಪೊಲೀಸರ ಮೇಲೆ ತಲವಾರ್ ದಾಳಿ ಮಾಡಿದಾಗ ಪೊಲೀಸರು ಗುಂಡು ಹಾರಿಸಿ ಓರ್ವನನ್ನು ಬಂಧಿಸಿದ್ದಾರೆ.
ಖಲೀಲ್ ಗಾಯಾಳು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಪಿಎಸ್ಐ ಪ್ರಸನ್ನ ಅವರಿಗೂ ಗಾಯವಾಗಿದೆ. ಆರೋಪಿಗಳನ್ನು ಪೊಲೀಸರು ಬಂಟ್ವಾಳದಿಂದ ಹಿಂಬಾಲಿಸಿ ಹೋಗಿದ್ದರು.