ಕೊಲಾರದ ಸರ್ವೇ ಸೂಪರ್ ವೈಸರ್ ಸುರೇಶ್ ಬಾಬುಗೆ ಸೇರಿದ ೬ ಕಡೆಗಳಲ್ಲಿ ಲೋಕಾಯುಕ್ತ ದಾಳಿ / ಕಡತಗಳು ವಶಕ್ಕೆ

Published on

ಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರದ ಸರ್ವೇ ಇಲಾಖೆಯ ಸೂಪರ್‌ವೈಸರ್ ಸುರೇಶ್ ಬಾಬು ರವರ ಮನೆ, ಕಛೇರಿ, ಅಣ್ಣ-ತಮ್ಮಂದಿರ ಮನೆ, ಸ್ನೇಹಿತರ ಮನೆ ಸೇರಿ ೬ ಕಡೆ ಗುರುವಾರ ಬೆಳ್ಳಂಬೆಳ್ಳಿಗ್ಗೆ ಕೋಲಾರ, ಮಾಲೂರು ಹಾಗೂ ನಿಡಘಟ್ಟ ನಿವಾಸಗಳಿಗೆ ಬೆಂಗಳೂರು ಮತ್ತು ಕೋಲಾರದ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಕೆಲವು ಕಡತಗಳನ್ನು ಮತ್ತು ಮನೆಯಲ್ಲಿ ಸಿಕ್ಕ ಬೆಳ್ಳಿ, ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.

ಕೋಲಾರ ಜಿಲ್ಲಾಧಿಕಾರಿಗಳ ಕಛೇರಿ, ಭೂದಾಖಲೆಗಳ ವಿಭಾಗದ ಸರ್ವೇ ಸೂಪರ್‌ವೈಸರ್ ಸುರೇಶ್‌ಬಾಬು ರವರ ನಿಡಘಟ್ಟದ ಮನೆ, ತೋಟದ ಮನೆ ಹಾಗೂ ಗ್ರಾಮದ ಸಹೋದರನ ಮನೆ, ಮಾಲೂರಿನ ಅಣ್ಣ ಲಕ್ಷಿö್ಮÃನಾರಾಯಣ, ವಿಜಯಕುಮಾರ್, ಕೋಲಾರದ ವೈದ್ಯ ಪ್ರಸನ್ನಕುಮಾರ್ ಹಾಗೂ ನಿವೃತ್ತ ಪಿ.ಡಿ.ಓ. ನಾಗರಾಜ್ ಮನೆ ಮೇಲೆ ಏಕ ಕಾಲದಲ್ಲಿ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸುರೇಶ್‌ಬಾಬು ಹೆಸರಿನಲ್ಲಿದ್ದ ನಿವೇಶನ, ಹೆಂಡತಿ ಹೆಸರಿನಲ್ಲಿದ್ದ ನಿವೇಶನ ಹಾಗೂ ಮಾಲೂರಿನ ಬಳಿ ಲೇಔಟ್ ಮತ್ತು ಅಪಾರ್ಟ್ಮೆಂಟ್ ಹೊಂದಿರುವ ದಾಖಲೆಗಳು, ಅಣ್ಣ ತಮ್ಮಂದಿರು ಮತ್ತು ಸ್ನೇಹಿತರ ಹೆಸರಿನಲ್ಲಿ ಇಟ್ಟಿದ್ದ ಕೆಲವು ಜಮೀನು ಮತ್ತು ನಿವೇಶನಗಳ ಹಾಗೂ ವಾಹನಗಳನ್ನು ಹೊಂದಿರುವ ದಾಖಲೆಗಳನ್ನು ವಶಪಡಿಸಿಕೊಂಡು, ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನೂ ಕಳೆದ ೬ ತಿಂಗಳ ಹಿಂದೆಯಷ್ಟೆ ಇದೆ ಸುರೇಶ್ ಬಾಬು ವಿರುದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣ ಸೇರಿದಂತೆ ಸರ್ಕಾರಿ ಆಸ್ತಿ ಪತ್ರಗಳು, ಹಲವು ದಾಖಲೆಗಳು ಸಿಕ್ಕಿತ್ತು. ಮತ್ತೆ ಹಲವು ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಧನಂಜಯ ನೇತೃತ್ವದಲ್ಲಿ ಡಿವೈ.ಎಸ್.ಪಿ. ಸಧೀರ್, ಬೆಂಗಳೂರು ಡಿ.ವೈ.ಎಸ್.ಪಿ. ಗಿರೀಶ್, ಇನ್ಸ್ಪೆಕ್ಟರ್‌ಗಳಾದ ರೇಣುಕ, ಆಂಜಿನಪ್ಪ, ಯಶ್ವಂತ್‌ಕುಮಾರ್, ಚಿಕ್ಕಬಳ್ಳಾಪುರ ಇನ್ಸ್ಪೆಕ್ಟರ್ ನಿರ್ಮಲ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ೬ ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು.

ಚಿತ್ರ ೦೮ ಕೆ.ಎಲ್.ಆರ್. ೦೩ : ಸುರೇಶ್‌ಬಾಬು ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net