

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಹಿರಿಯೂರು ತಾಲೂಕು ಮೇಟಿಕುರ್ಕೆ ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆದಾರರಿಗೆ ಶೀಘ್ರ ನಿವೇಶನ ಹಂಚಿಕೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಚಾಲನೆ ಸಿಗಲಿದೆ.
ಚೆನ್ನೆ-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯಡಿ ಲೇಔಟ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ 2022ರ ಅಕ್ಟೋಬರ್‌ರಲ್ಲಿ ಮುಂದಾಗಿತ್ತು. ಮೇಟಿಕುರ್ಕೆ ಮತ್ತು ಕರಿಯೋಬೇನಹಳ್ಳಿಯಲ್ಲಿ 1156.12 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಇದನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು 2023 ರ ಮಾರ್ಚ್‌ನಲ್ಲಿ ಮಂಡಳಿ ನಿರ್ಧರಿಸಿತ್ತು. ಪ್ರಸ್ತುತ ಪ್ರತಿ ಎಕರೆಗೆ 93 ಲಕ್ಷ ರೂ. ದರ ನಿಗದಿಯಾಗಿದೆ.
ಮಾಲಿನ್ಯ ಆಧಾರಿತವಾಗಿ ಬಿಳಿ, ಹಸಿರು ಮತ್ತು ಹಳದಿ ಎಂದು ವರ್ಗೀಕರಿಸಿರುವ ಉದ್ದಿಮೆಗಳನ್ನು ಇಲ್ಲಿ ಸ್ಥಾಪಿಸಲು ಕರ್ನಾಟಕ ಪ ರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎನ್ವಿರಾಲ್‌ಮೆಂಟಲ್ ಕ್ಲಿಯರೆನ್ಸ್ ನೀಡಿದೆ. ರಸ್ತೆ, ಡ್ರೈನೇಜ್ ಮತ್ತಿತರ ಮೂಲ ಸೌಕರ್ಯಗಳ ಕಾಮಗಾರಿ ಸಾಗಿದೆ.
ವಿವಿ ಸಾಗರದಿಂದ 10 ಎಂಎಲ್‌ಡಿ ನೀರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂಚಿಕೆ ಬಳಿಕ ವಿವಿ ಸಾಗರದಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತದೆ. ಅನುಮೋದಿತ ನಕ್ಷೆ ಪ್ರಕಾರ ಉದ್ದೇಶಿತ ಕೈಗಾರಿಕೆ ಘಟಕಗಳಿಗೆ 743.63 ಎಕರೆ ವಿಸ್ತೀರ್ಣದ ನಿವೇಶನಗಳು ಹಂಚಿಕೆಯಾಗಲಿವೆ.
ಎರಡು ಎಕರೆ ಮೀರುವ ಹಾಗೂ 15 ಕೋಟಿ ರೂ.ಗಳಿಂದ 500 ಕೋಟಿ ರೂ. ಬಂಡವಾಳದ ಉದ್ದಿಮೆಗಳಿಗೆ ರಾಜ್ಯ ಹಾಗೂ 2 ಎಕ ರೆ ಮತ್ತು 15 ಕೋಟಿ ರೂ.ಒಳಗಿರುವ ಉದ್ದಿಮೆಗಳಿಗೆ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಗಳಿಂದ ನಿವೇಶನಗಳ ಹಂಚಿಕೆಯಾಗಲಿದೆ.
ಜಿಲ್ಲಾ ಸಮಿತಿಗೆ 120 ಉದ್ದಿಮೆದಾರರು ನಾನಾ ವಿಸ್ತೀರ್ಣದ ನಿವೇಶನಗಳ ಮಂಜೂರು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೈಗಾರಿಕೆ ಇಲಾ ಖೆ ಜೆಡಿ, ತಹಸೀಲ್ದಾರ್ ಮತ್ತಿತರ ಅಧಿಕಾರಿಗಳಿರುವ ಜಿಲ್ಲಾ ಮಟ್ಟದ ಲ್ಯಾಂಡ್ ಆಡಿಟ್ ಕಮಿಟಿಯು ಹಂಚಿಕೆಗೆ ಕ್ರಮ ವಹಿಸಿದೆ. ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿಯಮಾನುಸಾರ ಶೀಘ್ರ ನಿವೇಶನ ಹಂಚಿಕೆಯಾಗಲಿದೆ.
ಯಾವೆಲ್ಲ ಕೈಗಾರಿಕೆಗಳು ಸ್ಥಾಪನೆ?
ಮೇಟಿಕುರ್ಕೆ ಕೈಗಾರಿಕಾ ಪ್ರದೇಶದಲ್ಲಿ ರೈಸ್‌ಮಿಲ್, ಪಿಬಿ ಸ್ಟ್ರಕ್ಚರ್, ಟೆಕ್ಸ್‌ಟೈಲ್, ಕಾಯರ್, ಬೇಕರಿ, ಕೋಕನಟ್ ಪೌಡರ್, ಎಗ್‌ಪೌಡರ್, ಸೆಂಟ್ರಲೈಸ್ಡ್ ಲ್ಯೂಬ್ರಿಕೇಷನ್ ಸಿಸ್ಟಮ್ ಮೋಟಾರ್ಸ್, ಪಿವಿಸಿ, ಪ್ಲಾಸ್ಟಿಕ್ ಪೈಪ್ಸ್, ಆಯಿಲ್‌ಮಿಲ್, ವುಡನ್ ಡೋರ್, ಪ್ರಿಂಟಿಗ್‌ಯೂನಿಟ್, ಸಿರಿಧಾನ್ಯ, ಕಾಳುಕಡಿ ಉತ್ಪನ್ನಗಳು, ಟ್ರಾನ್ಸ್‌ಫಾರ್ಮ್, ಕೋಲ್ಡ್ ಸ್ಟೋರೇಜ್, ವೇರ್‌ಹೌಸ್, ಅಡಕೆ ಪ್ಲೇಟ್ ಇತ್ಯಾದಿ ಹತ್ತು ಹಲವು ಉದ್ದಿಮೆಗಳು ಸ್ಥಾಪನೆಯಾಗಲಿವೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಒದಗಿಸುವ ಭರವಸೆ ಮೂಡಿದೆ.
ಚೆನ್ನೈ-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್‌ನಡಿ ಇಂಡಸ್ಟ್ರಿಯಲ್ ಟೌನ್‌ಶಿಫ್‌ಗಳ ಅಭಿವೃದ್ಧಿ ಪಡಿಸುವುದಾಗಿ ಹಿಂದಿನ ರಾಜ್ಯಸರ್ಕಾ ರ ಭರವಸೆ ನೀಡಿತ್ತು. ಕಳೆದ ಆಗಸ್ಟ್‌ನಲ್ಲೇ ಚಿತ್ರದುರ್ಗದ ಮೇಟಿಕುರ್ಕೆ, ಉಳ್ಳಾರ್ತಿಕಾವಲ್(59.19 ಎಕರೆ), ಹಾಸನ, ಕೋಲಾರ, ದಾವ ಣಗೆರೆ ಸಾರಥಿ-ಕುರುಬರಹಳ್ಳಿ(214.59) ಯಾದಗಿರಿ, ಧಾರವಾಡ, ವಿಜಯಪುರ, ಕಲಬುರುಗಿ ಹಾಗೂ ಮೈಸೂರಲ್ಲಿ ಅಭಿವೃದ್ಧಿ ಪಡಿಸಿರುವ ಕೈಗಾರಿಕೆ ಪ್ರದೇಶಕ್ಕೆ ಉದ್ದಿಮೆದಾರರಿಂದ ಮಂಡಳಿ ಅರ್ಜಿ ಆಹ್ವಾನಿಸಿದೆ.
ಕೋಟ್
ನಿವೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಸಿ ಕ್ರಮ ವಹಿಸಲಾಗುವುದು. ಮೀಸಲು ಸಹಿತ ನಿಯಾಮಾನುಸಾರ ನಿವೇಶನ ಹಂಚಿಕೆಯಾಗಲಿವೆ. ರಪ್ತು ಉತ್ಪನ್ನಗಳ ಉದ್ದಿಮೆಗಳು ಇಲ್ಲಿ ಸ್ಥಾಪನೆ ಆಗಲಿವೆ.
ಬಿ. ಆನಂದ್, ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಚಿತ್ರದುರ್ಗ.
---