ಕೈ ಮುಖಂಡರಲ್ಲ, ಮತದಾರರು ತೀರ್ಮಾನ ಮಾಡುತ್ತಾರೆ

01 KRN-1
????????????????????????????????????
Published on

ಕೆ.ಆರ್.ನಗರ: ಸೋಲು-ಗೆಲುವನ್ನು ತಾಲೂಕಿನ ಮತದಾರರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಮುಖಂಡರ ತೀರ್ಮಾನದಂತೆ ನಡೆಯುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ಹೇಳಿಕೆಗೆ ತಿರುಗೇಟು ನೀಡಿದರು.


ಪಟ್ಟಣದ ರೈಲ್ವೆ ಸ್ಟೇಷನ್ ಬಳಿ 50 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ತಂದಿದ್ದ ಪಟಾಕಿಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದಾಗ ಹೊಡೆಯಲಾಯಿತು. ಅದೇ ರೀತಿ 2018ರ ಚುನಾವಣೆಯಲ್ಲಿ ಫಲಿತಾಂಶಕ್ಕೂ ಮುಂಚೆ ವಿಜಯೋತ್ಸವ ಆಚರಿಸಿದ ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಬಾಲಿಶವಾಗಿದ್ದು, ಅದಕ್ಕೆಲ್ಲ ಉತ್ತರ ಕೊಡುವ ಅಗತ್ಯ ನನಗಿಲ್ಲ ಎಂದರು.


ನನಗೆ ಚುನಾವಣೆ ಭಯವಿದ್ದರೆ ಬೆಂಗಳೂ ರಿನ ಕಾರ್ಯಕ್ರಮ, ದೊಡ್ಡಬಳ್ಳಾಪುರದ ಜೆಡಿಎಸ್ ಪಕ್ಷದ ಕಾರ್ಯಕ್ರಮ ಹಾಗೂ ತಾಲೂಕಿನ ಮತ ದಾರರ ಮದುವೆ ಮತ್ತು ಇನ್ನಿತರ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿತ್ತೆ? ಕೆ.ಆರ್.ನಗರ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಮತ್ತು ಮತದಾರರು ಚುನಾವಣೆಯನ್ನು ಎದುರಿಸಲು ಸರ್ವಸನ್ನದ್ಧರಾಗಿದ್ದು, ಭಯ ಏನಿದ್ದರೂ ಕಾಂಗ್ರೆಸ್ ಮುಖಂಡರಿಗೆ ಎಂದು ವ್ಯಂಗವಾಡಿದರು.


ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡರ ವಿರುದ್ಧ ಅವರ ಆಪ್ತರು ಬಂಡಾಯ ಸಾರಿರುವುದು ಇದು ಹೊಸದೇನಲ್ಲಾ. ಕೆ.ಆರ್.ನಗರ ಸೇರಿದಂತೆ ಇತರ ಭಾಗಗಳ ಲ್ಲಿಯೂ ಕೆಲವು ಭಿನ್ನಭಿಪ್ರಾಯ ಗಳಿವೆ. ಆದರೆ ಚುನಾವಣೆ ಇನ್ನೂ ದೂರವಿರು ವುದರಿಂದ ಎಲ್ಲವನ್ನೂ ಸರಿಪಡಿಸುವ ಶಕ್ತಿ ಜೆಡಿಎಸ್ ವರಿಷ್ಠ ರಿಗಿದೆ ಎಂದರು. ಪಟ್ಟಣದ ಸಮಗ್ರ ಅಭಿವೃದ್ಧಿ ಗಾಗಿ ನಗರೋತ್ಪಾನ ಯೋಜನೆಯಲ್ಲಿ ಕೋಟ್ಯಂತರ ರೂ. ತಂದು ರಸ್ತೆಗಳು ಮತ್ತು ಚರಂಡಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮತ್ತೆ 10 ಕೋಟಿ ರೂ. ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಅನುದಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.


ಪುರಸಭಾ ಅಧ್ಯಕ್ಷ ಕೋಳಿಪ್ರಕಾಶ್, ಸದಸ್ಯ ರಾದ ಮಿಕ್ಸ್‌ರ್ ಶಂಕರ್, ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ತೋಂಟದಾರ್ಯ, ಸಂತೋಷ್‌ಗೌಡ, ಮಾಜಿ ಸದಸ್ಯರಾದ ಎನ್.ಶಿವಕುಮಾರ್, ರಾಜಾಶ್ರೀಕಾಂತ, ಮುಖಂಡರಾದ ಲೋಕೇಶ್, ವೀರಭದ್ರಚಾರ್, ಮಿಕ್ಸ್‌ರ್‌ರಾಜು, ಮಾಗಳಿ, ಅಜಯ್ ಪವರ್, ಎಂ.ಡಿ.ದರ್ಶನ್, ಮಹೇಶ್, ಜ್ಯೋತಿದೊಡ್ಡಯ್ಯ, ಟೌನ್ ಹರೀಶ್, ಮುಖ್ಯಾಧಿಕಾರಿ ಡಾ.ಜಯಣ್ಣ, ಇಂಜಿನಿಯರ್ ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net