ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ / ನಿವೃತ್ತ ಎರಡು ಶ್ವಾನಗಳಿಗೆ ಬಿಳ್ಕೋಡುಗೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ಕಾರಿ ನೌಕರರು ನಿವೃತ್ತಿಗೊಂಡರೆ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಇಲಾಖೆಗಳ ವತಿಯಿಂದ ಏರ್ಪಡಿಸಲಾಗುತ್ತದೆ. ಆದರೆ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಉತ್ತಮವಾದ ಸೇವೆ ಸಲ್ಲಿಸಿ, ಸೇವೆಯಿಂದ ನಿವೃತ್ತಿಹೊಂದಿದ ಎರಡು ಪೊಲೀಸ್ ಶ್ವಾನಗಳಿಗೆ ಹಾರ್ದಿಕ ಬಿಳ್ಕೋಡುಗೆ ಕಾರ್ಯಕ್ರಮವು ಜು.೩೧ ರಂದು ಜಿಲ್ಲಾ ಪೊಲೀಸ್ ಸಶಸ್ತç ಮೀಸಲು ಪಡೆಯ ಸಭಾಂಗಣದಲ್ಲಿ ವಿಶೇಷವಾದ ರೀತಿಯಲ್ಲಿ ನಡೆಯಿತು.

ಕೆಜಿಎಫ್ ಘಟಕದಲ್ಲಿ ಅಪರಾಧ ಪತ್ತೆ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ರಾಖೀ ಮತ್ತು ಬಿರ್ಲಾ ಶ್ವಾನಗಳನ್ನು ಗರಿಷ್ಠ ವಿಮೆಯ ಅವಧಿಯು ಮುಕ್ತಾಯಗೊಂಡಿರುವುದರಿAದ, ೯ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಎರಡೂ ಶ್ವಾನಗಳನ್ನು ಜು.೩೧ ರಂದು ನಿವೃತ್ತಿಗೊಳಿಸಲು ಅನುಮತಿಸಿ, ಕರ್ತವ್ಯದಿಂದ ಬಿಡುಗಡೆಗೊಳಿಸಲು ಪೊಲೀಸ್ ಪ್ರಧಾನ ಕಛೇರಿಯಿಂದ ಆದೇಶಿಸಲಾಗಿತ್ತು.

ಅದರಂತೆ, ಪ್ರಸ್ತುತ ನಿವೃತ್ತಿಗೊಳ್ಳುತ್ತಿರುವ ರಾಖೀ ಮತ್ತು ಬಿರ್ಲಾ ಶ್ವಾನಗಳನ್ನು ಜು.೩೧ ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಶ್ವಾನಗಳಿಗೆ ಕೆಜಿಎಫ್ ಜಿಲ್ಲಾ ಪೊಲೀಸ್ ಸಶಸ್ತç ಮೀಸಲು ಪಡೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ, ಹಾರ್ದಿಕ ಬಿಳ್ಕೋಡುಗೆ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಪೊಲೀಸ್ ಶ್ವಾನಗಳ ವಿಶ್ರಾಂತಿ ಜೀವನಕ್ಕೆ ಶುಭ ಕೋರಿದರು.

ಕೆಜಿಎಫ್ ಘಟಕದ ರಾಖೀ ಮತ್ತು ಬಿರ್ಲಾ ಶ್ವಾನಗಳನ್ನು ನಿವೃತ್ತಿಗೊಳಿಸಿದ ನಂತರ ಮುಂದಿನ ಪಾಲನೆ, ಪೋಷಣೆಗಾಗಿ ಆ ಶ್ವಾನಗಳ ಹ್ಯಾಂಡ್ಲರ್‌ಗಳಾದ ಎಹೆಚ್‌ಸಿ ಜಿ.ನಾಗರಾಜ್ (ರಾಖೀ ಶ್ವಾನ) ಮತ್ತು ಎಹೆಚ್‌ಸಿ ಎನ್.ರಾಜೇಶ್ (ಬಿರ್ಲಾ ಶ್ವಾನ) ಇವರುಗಳಿಗೆ ನೀಡಲಾಯಿತು.

ನಿವೃತ್ತಿಹೊಂದಿದ ರಾಖೀ ಮತ್ತು ಬಿರ್ಲಾ ಶ್ವಾನಗಳನ್ನು ಶಾಲು ಹೊದಿಸಿ, ಸನ್ಮಾನಿಸಿ, ಸೇವಾ ಪ್ರಮಾಣಪತ್ರ, ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆರ್‌ಪಿಐ ವಿ.ಸೋಮಶೇಖರ್, ಸೈಬರ್ ಕ್ರೆöÊಂ ಪಿಐ ಲಕ್ಷಿö್ಮÃನಾರಾಯಣ, ಪಿಎಸ್‌ಐ ವಿದ್ಯಾಶ್ರೀ, ಕೆ.ವಿ.ನಾರಾಯಣಸ್ವಾಮಿ, ಆರ್‌ಎಸ್‌ಐ ಜಗದೀಶ್, ಶಂಕರ್, ಶ್ರೀಶೈಲ ಕಾಖಂಡಕಿ, ಯಮನಪ್ಪ ಪಾತ್ರೂಟ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೩ : ನಿವೃತ್ತ ಪೊಲೀಸ್ ಶ್ವಾನಗಳನ್ನು ಸನ್ಮಾನಿಸಿದ ಎಸ್ಪಿ ಶಿವಾಂಶು ರಜಪೂತ್ ಮತ್ತಿತರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net