ಕೃಷಿಯಲ್ಲಿ ಆಧುನಿಕತೆ ಮುಂದುವರೆದರೂ ಹಳೇ ಪದ್ದತಿಯಲ್ಲಿಯೇ ಕೃಷಿ ಮಾಡುತ್ತಿರುವ ಕೃಷ್ಣಪ್ಪ / ಟ್ರಾö್ಯಕ್ಟರ್, ಟ್ರಿಲ್ಲರ್ ಬಳಸದೆ ನಾಟಿ ಹಸುಗಳಿಂದಲೇ ಉಳುಮೆ ಮಾಡಿ ಉತ್ತಮ ಇಳುವರಿ ಪಡೆಯುತ್ತಿರುವ ರೈತ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಆಧುನಿಕತೆ ಹೆಚ್ಚಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ರೈತರು ಹೆಚ್ಚು ಲಾಭ ಗಳಿಸಲು ಮುಂದಾಗಿದ್ದಾರೆ. ಆದರೆ ಕೋಲಾರ ತಾಲ್ಲೂಕಿನಲ್ಲೊಬ್ಬ ರೈತ ಹಳೇ ಪದ್ದತಿಯಲ್ಲಿಯೇ ಕೃಷಿ ಮಾಡುತ್ತಾ ಕಡಿಮೆ ಖರ್ಚಿನಲ್ಲಿಯೇ ಹೆಚ್ಚಿನ ಫಸಲು ತೆಗೆಯುತ್ತಿದ್ದಾರೆ. ಜೊತೆಗೆ ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ.

ಕೋಲಾರ ತಾಲ್ಲೂಕಿನ ಗದ್ದೆಕಣ್ಣೂರು ಗ್ರಾಮದ ರೈತ ಕೃಷ್ಣಪ್ಪ ಆಧುನಿಕತೆ ಎಷ್ಟೇ ಮುಂದುವರೆದರೂ ತನ್ನ ೫ ಎಕರೆ ಜಮೀನಿನಲ್ಲಿ ಇದುವರೆವಿಗೂ ಟ್ರಾಕ್ಟರ್ ಸೇರಿದಂತೆ ಯಾವುದೇ ಯಂತ್ರೋಪಕರಣಗಳನ್ನು ಬಳಸದೆ ದೇಸಿ ಹಸುಗಳಿಂದಲೇ ಉಳುಮೆ, ದೇಸಿ ಹಸುಗಳ ಸಗಣಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ತನ್ನ ಬೆಳೆಗಳಿಗೆ ಬಳಸುತ್ತಿದ್ದಾರೆ. ಕೀಟನಾಶಕಗಳು ಮತ್ತು ರಸಾಯನಿಕ ಗೊಬ್ಬರಗಳನ್ನು ಬಳಸದೆ ಕಡಿಮೆ ಖರ್ಚಿನಲ್ಲಿ ಬೆಳೆ ತೆಗೆದು ಸೈ ಎನಿಸಿಕೊಂಡಿದ್ದಾನೆ.

ರೈತ ಕೃಷ್ಣಪ್ಪ ತನ್ನ ೫ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆಯುತ್ತಾನೆ ಹಾಗು ರೇಷ್ಮೆ ಬೆಳೆಯುತ್ತಿದ್ದಾನೆ. ತನ್ನ ಮನೆಯಲ್ಲಿ ವರ್ಷಪೂರ್ತಿ ೭ ರಿಂದ ೮ ನಾಟಿ ಹಸುಗಳು ಹಾಗು ೫ ಸೀಮೆ ಹಸುಗಳನ್ನು ಸಾಕುತ್ತಿದ್ದಾನೆ. ನಾಟಿ ಹಸುಗಳ ಸಂತಾನೋತ್ಪತ್ತಿಗಾಗಿ ಸುತ್ತ ಮುತ್ತಲ ಗ್ರಾಮಗಳಲ್ಲಿನ ನಾಟಿ ಹಸುಗಳಿಗೆ ಉಚಿತವಾಗಿ ಕ್ರಾಸಿಂಗ್ ಮಾಡಿಸಿ ಸಂತಾನೋತ್ಪತ್ತಿ ಹೆಚ್ಚಿಸಲು ಸಹಕಾರ ನೀಡುತ್ತಿದ್ದಾನೆ.

ನಾಟಿ ಹಸುಗಳ ಸಗಣಿ ಹೆಚ್ಚಿನ ಫಲವತತ್ತೆ ಹೊಂದಿರುವುದರಿAದ ಆ ಗೊಬ್ಬರವನ್ನು ಭೂಮಿಗೆ ಬಳಸುವುದರಿಂದ ಹೆಚ್ಚು ಫಲವತ್ತಾಗಿರುತ್ತದೆ ಹಾಗು ಬೆಳೆಗಳಿಗೆ ಯಾವುದೇ ರೋಗ ರುಜಿನಗಳು ಹರಡದಂತೆ ತಡೆಯುತ್ತದೆ.

ನಾಟಿ ಹಸುಗಳ ಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶವಿರುವುದರಿAದ ಅವುಗಳ ಹಾಲನ್ನು ಮನುಷ್ಯರು ಸೇವಿಸುವುದರಿಂದ ಆರೋಗ್ಯವಾಗಿರುತ್ತಾರೆ. ಆದ್ದರಿಂದ ಅವರು ಮನೆಯಲ್ಲಿ ಅದೇ ಹಾಲನ್ನು ಬಳಸುತ್ತಾರೆ. ನಾಟಿ ಹಸುಗಳಿಂದಲೇ ತನ್ನ ಐದು ಎಕರೆಯ ಜಮೀನಿನಲ್ಲಿ ಕೃಷಿ ಭೂಮಿಯನ್ನು ಉಳುಮೆ ಮಾಡಿ ಬೆಳೆಗಳನ್ನು ತೆಗೆಯುತ್ತಿದ್ದಾನೆ. ಹಾಗೂ ಸರಕು ಸಾಗಾಣಿಕೆಗೆ ಎತ್ತಿನ ಬಂಡಿಯನ್ನು ಬಳಸುತ್ತಿದ್ದಾರೆ.

ಕೋಟ್

ನಾವು ನಮ್ಮ ತಂದೆ ಕಾಲದಿಂದಲೂ ನಮ್ಮ ಮನೆಯಲ್ಲಿ ಹೆಚ್ಚು ನಾಟಿ ಹಸುಗಳನ್ನು ಸಾಕುತ್ತೇವೆ. ನಾಟಿ ಹಸುಗಳಿಂದ ಪೌಷ್ಟಿಕ ಹಾಲು, ಬೆಳೆಗಳಿಗೆ ಫಲವತ್ತಾದ ಗೊಬ್ಬರ ಮತ್ತು ಕೃಷಿ ಉಳುಮೆ ಸೇರಿದಂತೆ ಎಲ್ಲಾ ಕೃಷಿ ಕೆಲಸಗಳಿಗೂ ನಾಟಿ ಹಸುಗಳನ್ನು ಬಳಸುತ್ತೇವೆ. ಈ ವರೆವಿಗೂ ನಮ್ಮ ಭೂಮಿಯಲ್ಲಿ ಯಾವುದೇ ಯಂತ್ರೋಪಕರಣಗಳನ್ನು ಬಳಸಿ ವ್ಯವಸಾಯ ಮಾಡಿಲ್ಲ. ನಾಟಿ ಹಸುಗಳು ನಮ್ಮ ಮನೆಗೆ ಮಹಾಲಕ್ಷ್ಮಿಗಳು ಇದ್ದಂತೆ.

-ಕೃಷ್ಣಪ್ಪ, ರೈತ. ಗದ್ದೆಕಣ್ಣೂರು

ಕೋಟ್

ಹಳ್ಳಿಕಾರ್ ಎತ್ತುಗಳು ಮತ್ತು ಹಸುಗಳು ಮನುಷ್ಯನ ಜೀವನಕ್ಕೆ ಹೆಚ್ಚು ಉಪಯೋಗಕರ ನಾಟಿ ಹಸುಗಳನ್ನು ರೈತರು ಹೆಚ್ಚು ಸಾಕಲು ಮುಂದಾಗಬೇಕು ಆದರೆ ನಗರ ಪ್ರದೇಶಗಳಲ್ಲಿ ಕೆಲವರು ಶೋಕಿಗಾಗಿ ಹಳ್ಳಿಕಾರ್ ಎತ್ತುಗಳ ಬೆಲೆಗಳನ್ನು ೧೦ ರಿಂದ ೧೫ ಲಕ್ಷಕ್ಕೆ ಏರಿಸಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಹಳ್ಳಿಕಾರ್ ಎತ್ತುಗಳನ್ನು ದುಬಾರಿ ಖರ್ಚಿಗೆ ಖರೀದಿಸಲಾಗದೆ ಟ್ರಾಕ್ಟರ್, ಟ್ರಿಲ್ಲರ್ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ. ಎತ್ತು ಮತ್ತು ಹಸುಗಳನ್ನು ಶೋಕಿಗೆ ಬಳಕೆ ಮಾಡಿಕೊಳ್ಳದೆ ರೈತರಿಗೆ ಬಳಕೆಯಾಗಬೇಕು. ನಮ್ಮ ಮನೆಯಲ್ಲಿ ನಮ್ಮ ತಂದೆಯವರು ಸಾಕಿದ ಹಸುಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದೆ ನಮ್ಮ ತಂದೆಯವರ ಹಾದಿಯಲ್ಲಿಯೇ ಮಕ್ಕಳಾದ ನಾವು ಕೃಷಿ ಪದ್ದತಿಯನ್ನು ಮುಂದುವರೆಸಿದ್ದೇವೆ.

-ಸುರೇಶ್ ಬಾಬು, ರೈತ ಕೃಷ್ಣಪ್ಪ ಮಗ

ಚಿತ್ರ ೧೯ ಕೆ.ಎಲ್.ಆರ್. ೦೧ : ನಾಟಿ ಹಸುಗಳಲ್ಲಿ ಉಳುಮೆ ಮಾಡುತ್ತಿರುವ ಕೃಷ್ಣಪ್ಪ

ಚಿತ್ರ ೧೯ ಕೆ.ಎಲ್.ಆರ್. ೦೧ಎ : ನಾಟಿ ಹಸು ಮತ್ತು ಎತ್ತುಗಳನ್ನು ಸಾಕುತ್ತಿರುವ ಕೃಷ್ಣಪ್ಪ

ಚಿತ್ರ ೧೯ ಕೆ.ಎಲ್.ಆರ್. ೦೧ಬಿ : ಗದ್ದೆಕಣ್ಣೂರು ಗ್ರಾಮದ ರೈತ ಕೃಷ್ಣಪ್ಪ

ಚಿತ್ರ ೧೯ ಕೆ.ಎಲ್.ಆರ್. ೦೧ಸಿ : ರೈತ ಕೃಷ್ಣಪ್ಪ ಮಗ ಸುರೇಶ್‌ಬಾಬು, ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net