

ಚಿತ್ರದುರ್ಗ:ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ ಅಥವಾ ಮೇಕೆ ಸಾಕಾಣಿಕೆಗೆ ಜು.31ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ಕೃಷಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿ,ಪರಿ ಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು. ಜಿಲ್ಲೆಗೆ 706 ಘಟಕಗಳ ಗುರಿ ಇದೆ. ಪ್ರತಿ ಘಟಕ್ಕೆ ತಗಲುವ 1.75 ಲಕ್ಷ ರೂ.ವೆಚ್ಚಕ್ಕೆ ರಾಜ್ಯಸರ್ಕಾರದಿಂದ 43,750 ರೂ.ಸಹಾಯ ಧನ ಭರಿಸಲಿದ್ದು, ಫಲಾನುಭವಿಗಳು 43,750 ರೂ.ವಂತಿಕೆ ನೀಡಬೇಕು.ರಾಜ್ಯ ಹಣಕಾಸು ಸಂಸ್ಥೆಯಿಂದ ಶೇ.9.26ರ ಬಡ್ಡಿ ದರದಲ್ಲಿ 87,500 ರೂ.ಸಾಲ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಪಶು ಆಸ್ಪತ್ರೆ ಆವರ ಣದಲ್ಲಿರುವ ನಿಗಮದ ಕಚೇರಿಯನ್ನು(ದೂರವಾಣಿ ಸಂಖ್ಯೆ 08194-222718/9448656231)ಸಂಪರ್ಕಿಸಬಹುದು.