ಕುಡುಗೋಲಿನಿಂದ ಹಲ್ಲೆ

Crime Logo
Published on

ಜಮೀನಿನಲ್ಲಿ ಮೇಯುತ್ತಿದ್ದ ದನಗಳನ್ನು ಓಡಿಸಿದ ಕಾರಣಕ್ಕಾಗಿ ವ್ಯಕ್ತಿಯೋರ್ವ ಜಮೀನು ಮಾಲೀಕನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ನಾಗನಹಳ್ಳಿ ನಿವಾಸಿ ಸಿದ್ದೇಗೌಡ ಎಂಬವರೇ ಅದೇ ಗ್ರಾಮದ ದಿಲೀಪ್ ಎಂಬವರಿಂದ ಹಲ್ಲೆಗೊಳಗಾದವರು.

ದಿಲೀಪ್ ಅವರಿಗೆ ಸೇರಿದ ಹಸುಗಳು ನನ್ನ ಜಮೀನಿನಲ್ಲಿ ಮೇಯುತ್ತಿದ್ದುಘಿ, ಈ ವೇಳೆ ಜಾನುವಾರುಗಳನ್ನು ಬೇರೆಡೆಗೆ ಓಡಿಸಿದ್ದಕ್ಕೆ ದಿಲೀಪ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸಿದ್ದೇಗೌಡ ದೂರು ನೀಡಿದ್ದುಘಿ, ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net