ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ

17bhr 2 blood camp
ಬಾಳೆಹೊನ್ನೂರಿನಲ್ಲಿ ರಕ್ತದಾನ ಶಿಬಿರ ನಡೆಯಿತು.
Published on

ಬಾಳೆಹೊನ್ನೂರು: ಪ್ರತಿಯೊಬ್ಬರೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಿಜಯಮಾತೆ ಚರ್ಚ್ ಧರ್ಮಗುರು ೌಲ್ ಡಿಸೋಜಾ ಹೇಳಿದರು.

ಪಟ್ಟಣದ ವಿಜಯಮಾತೆ ಚರ್ಚ್ ಹಾಗೂ ಚಿಕ್ಕಮಗಳೂರಿನ ಹೋಲಿ ಕ್ರಾಸ್ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮೂಳೆ, ನೇತ್ರ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವೇ ಮುಖ್ಯವಾಗಿದ್ದು ಆರೋಗ್ಯವಿಲ್ಲದಿದ್ದರೆ ಎಲ್ಲವೂ ನಶ್ವರ. ಪೌಷ್ಟಿಕ ಆಹಾರ, ದೈಹಿಕ ಚಟುವಟಿಕೆಗಳ ಮೂಲಕ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು. ಹೋಲಿಕ್ರಾಸ್ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ಆಯೋಜಿಸಿದ್ದು ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಧರ್ಮಗುರು ಕೀರ್ತಿ ಕಿರಣ್, ಹೋಲಿಕ್ರಾಸ್ ಆಸ್ಪತ್ರೆ ವೈದ್ಯರಾದ ಮಾಲತೇಶ್, ವಿನಯ್, ಸಿಸ್ಟರ್ ಲೂಸಿ ಜಾನ್, ನವ್ಯಾ, ವಿಜಯಮಾತೆ ಚರ್ಚ್ ಸಮಿತಿ ಸದಸ್ಯರಾದ ಒ.ಡಿ.ಸ್ಟೀನ್, ಸೈಮನ್, ಸುನೀಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net