ಕಾರ್ಯಕ್ರಮ ವಿಳಂಬಕ್ಕೆ ತನ್ವೀರ್ ಬೇಸರ

4
Published on

ಯುವ ಸಮೂಹಕ್ಕೆ ಮಾದರಿಯಾಗಬೇಕಾಗಿರುವ ಯುವಜನೋತ್ಸವ ಕಾರ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭ ಮಾಡದೇ ಇರುವುದಕ್ಕೆ ಶಾಸಕ ತನ್ವೀರ್ ಸೇಠ್ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಜೀವನದಲ್ಲಿ ಸಮಯಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಬೇಕು ಎಂದು ನಾವು ಭಾಷಣದಲ್ಲಿ ಹೇಳುತ್ತೇವೆ. ಆದರೆ 10 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. 10.15ಕ್ಕೆ ಬನ್ನಿ, ಜಿಲ್ಲಾ ಉಸ್ತುವಾರಿ ಸಚಿವರು ಬರುತ್ತಾರೆ ಎಂದು ನನಗೆ ತಿಳಿಸಲಾಗಿತ್ತು. ಮತ್ತೆ ಅದು 15 ನಿಮಿಷ ಮುಂದೆ ಹೋಯಿತು. ಕೊನೆಗೆ ಸಚಿವರು ಬರುವುದಿಲ್ಲ, ಈಗ ಬಂದುಬಿಡಿ ಎಂದು ಕರೆದಿದ್ದಾರೆ. ಇನ್ನೂ ಆಹ್ವಾನ ಪತ್ರಿಕೆಯಲ್ಲಿ ಇರುವ ಅತಿಥಿಗಳನ್ನು ನೋಡಿ, ನಾವು ಯಾರು ಬರುತ್ತಾರೆ ಎಂದು ಲೆಕ್ಕಹಾಕುವ ಹೊತ್ತಿಗೆ ಹತ್ತು ಹದಿನೈದು ನಿಮಿಷ ಮೀರಿ ಹೋಗಿರುತ್ತದೆ. ಆದ್ದರಿಂದ ಯಾರೇ ಆಗಲಿ ಸಮಯಪ್ರಜ್ಞೆ ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net