ಕಾರ್ಮಿಕರು ಆರೋಗ್ಯ ಕಾಳಜಿ ವಹಿಸಲಿ

14kdr1 health camp
ಕಡೂರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಧರ್ಮರಾಜ್ ಉದ್ಘಾಟಿಸಿದರು. ಕೆ.ಜಿ.ಲೋಕೇಶ್ವರ್, ಏಳುಕೋಟಿ, ಯೋಗೀಶ್, ಕೆ.ಪ್ರಕಾಶ್, ಪ್ರವೀಣ್ ಮತ್ತಿತರಿದ್ದರು.
Published on

ಕಡೂರು: ದುಡಿಮೆಯ ಒತ್ತಡದ ನಡುವೆಯೂ ಪ್ರತಿಯೊಬ್ಬ ಕಾರ್ಮಿಕರೂ ಆರೋಗ್ಯ ಕಾಳಜಿ ವಹಿಸಬೇಕಿದೆ ಎಂದು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಧರ್ಮರಾಜ್ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಜೀವಿತಾ ೌಂಡೇಷನ್, ಎಪಿಎಂಸಿ, ವಿಜಯವಾಣಿ ದಿನಪತ್ರಿಕೆ, ವಿನಾಯಕ ಹಮಾಲಿ ಕಾರ್ಮಿಕರ ಸಂಘ, ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಹೃದಯಾಲಯ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ದುಡಿಮೆಗೆ ಹೆಚ್ಚಿನ ಒತ್ತು ನೀಡುವ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ನಿಗಾ ವಹಿಸಬೇಕಿದೆ. ಕುಟುಂಬದ ಹಿತ ಕಾಪಾಡಲು ಆರೋಗ್ಯ ರಕ್ಷಣೆ ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.

ಜೀವಿತಾ ೌಂಡೇಶನ್ ನಿರ್ದೇಶಕ ಕೆ.ಜಿ.ಲೋಕೇಶ್ವರ್ ಮಾತನಾಡಿ, ಆರೋಗ್ಯ ನಿರ್ಲಕ್ಷಿಸಿ ಜೀವನ ಹಾಳುಮಾಡಿಕೊಳ್ಳಬಾರದು. ಕಾರ್ಮಿಕರ ಆರೋಗ್ಯ ಕಾಳಜಿ ಹಿನ್ನೆಲೆಯಲ್ಲಿ ಜೀವಿತಾ ೌಂಡೇಶನ್‌ನಿಂದ ಶಿಬಿರ ಆಯೋಜಿಸಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಜತೆಯಲ್ಲಿ ಸರ್ಕಾರ ಕಾರ್ಮಿಕರಿಗಾಗಿ ಸಾಕಷ್ಟು ಸವಲತ್ತು ನೀಡುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಕಾರ್ಮಿಕರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೀವಿತಾ ೌಂಡೇಶನ್ ಅಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ, ಕಾರ್ಮಿಕರಿಗಾಗಿಯೇ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಒತ್ತಡದ ಕೆಲಸದ ನಡುವೆ ಆರೋಗ್ಯವನ್ನು ನಿರ್ಲಕ್ಷಿಸುತ್ತಿರುವುದು ವಿಪರ್ಯಾಸ ಎಂದರು.

75ಕ್ಕೂ ಹೆಚ್ಚು ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವಿನಾಯಕ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ವಿಜಯವಾಣಿ ವರದಿಗಾರ ಎಚ್.ಆರ್.ದೇವರಾಜ್, ಎಪಿಎಂಸಿ ಲೆಕ್ಕಾಧಿಕಾರಿ ಏಳುಕೋಟಿ, ನಾರಾಯಣ ಹೃದಯಾಲಯ ವೈದ್ಯರಾದ ಯಶಸ್, ಡಾ. ನಿತಿನ್, ಕಿರಣ್, ಶರತ್, ರಾಹುಲ್, ಮಧುಕರ್, ಜೀವಿತಾ, ಪ್ರಶಾಂತ್, ರವಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net