ಕಾಯಿಲೆಗಳನ್ನು ದೂರ ಮಾಡಬಲ್ಲದು ತಾಯಿ ಹಾಲು

09 SARAG 01
ಸರಗೂರು ತಾಲೂಕಿನ ಕೂಡಗಿ ಹಾಡಿ ಮತ್ತು ಕುರ್ಣೇಗಾಲ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ ಉದ್ಘಾಟಿಸಿದರು. ಡಾ. ಅಲೀಮ್ ಪಾಷಾ ಇತರರು ಇದ್ದರು.
Published on

ಸರಗೂರು: ತಾಯಿ ಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಮೊದಲು ಬರುವ ಗಿಣ್ಣು ಹಾಲು ಮಗು ಜನಿಸಿದ ಒಂದು ಗಂಟೆಯೊಳಗೆ ಕುಡಿಸಬೇಕು. ಇದರಿಂದ ಮುಂಬರುವ ಕಾಯಿಲೆಗಳಿಂದ ಮಗುವನ್ನು ರಕ್ಷಣೆ ಮಾಡಬಹುದು ಎಂದು ಗ್ರಾಪಂ ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ ತಿಳಿಸಿದರು.

ತಾಲೂಕಿನ ಬಿ ಮಟಕೆರೆ ಗ್ರಾಪಂ ವ್ಯಾಪ್ತಿಯ ಕೂಡಗಿ ಹಾಡಿ ಮತ್ತು ಕುರ್ಣೇಗಾಲದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಯಿ ಹಾಲು ಮಗುವಿಗೆ ದಿವ್ಯಾಮೃತವಿದ್ದಂತೆ. ಈ ಅಮೃತವನ್ನು ಪ್ರತಿ ಹುಟ್ಟಿದ ಮಗುವಿಗೆ ತಾಯಿ ಕುಡಿಸಬೇಕು. ಇದರಿಂದ ತಾಯಿ ಹಾಗೂ ಮಗುವಿನ ಬಾಂಧವ್ಯ ಕೂಡ ಗಟ್ಟಿಯಾಗಿರುತ್ತದೆ ಎಂದರು.

ಡಾ.ಅಲೀಮ್ ಪಾಷಾ ಮಾತನಾಡಿ, ಹಾಡಿಗಳಲ್ಲಿ ಜನರು ಮೂಢನಂಬಿಕೆಗಳಿಗೆ ಅಂಟಿಕೊಂಡಿರದೆ ಮಕ್ಕಳ ರಕ್ಷಣೆಗೆ ವೈದ್ಯರ ಸಲಹೆಗಳನ್ನು ಪಾಲಿಸಬೇಕು. ಮನೆಯ ಹೆರಿಗೆಗಳನ್ನು ತಪ್ಪಿಸಿ ಆಸ್ಪತ್ರೆ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಜಯಶ್ರೀ, ದಿವ್ಯಾ, ಮಹೇಶ್, ಅಂಗನವಾಡಿ ಕಾರ್ಯಕರ್ತೆ ರತ್ನಕಲಾ, ಆಶಾಕರ್ತೆ ಶಶಿಕಲಾ, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net