ವಿಜಯವಾಣಿ ಸುದ್ದಿಜಾಲ ಕೆ.ಜಿ.ಎಫ್.
ತಾಲ್ಲೂಕಿನ ಕಾಮಸಮುದ್ರಂ ಪೊಲೀಸ್ ಠಾಣೆ ವ್ಯಾಪ್ತಿಯ ವಾಹನ ಕಳ್ಳತನ ಪ್ರಕರಣಕ್ಕೆ ಸಂಬAಧ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಕಳುವಾಗಿದ್ದ ಸುಮಾರು ೧,೨೦,೦೦೦ ರೂ.ಗಳ ಬೆಲೆ ಬಾಳುವ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಕಾಮಸಮುದ್ರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಅ.೧೩ ರಂದು ದೂರುದಾರರಾದ ಆರಿಮಾನಹಳ್ಳಿ ಗ್ರಾಮದ ಮುರಳಿ ಎಂಬುವರು ಮನೆಯ ಮುಂದೆ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನವು ಕಳ್ಳತನವಾಗಿರುವ ಬಗ್ಗೆ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು.
ಡಿವೈಎಸ್‌ಪಿ ¯ಕ್ಷö್ಮಯ್ಯ ಮತ್ತು ಕಾಮಸಮುದ್ರಂ ವೃತ್ತ ನಿರೀಕ್ಷಕರಾದ ಜಿ.ಸಿ.ನಾರಾಯಣಸ್ವಾಮಿ ರವರ ಮಾರ್ಗದರ್ಶನದಲ್ಲಿ ಕಾಮಸಮುದ್ರಂ ಪಿಎಸ್‌ಐ ಕಿರಣ್‌ಕುಮಾರ್ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಆಂದ್ರಪ್ರದೇಶದ ಜಿತ್ತೂರು ಜಿಲ್ಲೆಯ ವಾಸಿಗಳಾದ ವಿ.ಮಧು (೨೦), ನಂದೀಶ್ ಅಲಿಯಾಸ್ ಮೂರ್ತಿ (೨೦) ಮತ್ತು ಕಾರ್ತಿಕ್ (೨೩) ಎಂಬುವರÀನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿ ದ್ವಿಚಕ್ರ ವಾಹನವನ್ನು ಈಗಾಗಲೇ ಕಳ್ಳತನ ಮಾಡಿರುವುದು ವಿಚಾರಣೆ ವೇಳೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಗಳು ಕಳವು ಮಾಡಿದ್ದ ೧,೨೦,೦೦೦ ರೂ.ಗಳ ಬೆಲೆ ಬಾಳುವ ೨ ದ್ವಿಚಕ್ರ ವಾಹನಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿದ್ದಾರೆ.
ಪೋಲಿಸ್ ಸಿಬ್ಬಂದಿಗಳಾದ ರಾಮಕೃಷ್ಣರೆಡ್ಡಿ, ಮುನಾವರ್‌ಪಾಷ, ಮಂಜುನಾಥರೆಡ್ಡಿ, ರಾಮರಾವ್, ಮಂಜುನಾಥ್, ಮಾರ್ಕೊಂಡ, ಲಕ್ಷö್ಮಣ್‌ತೇಲಿ ಹಾಗೂ ಜೀಪ್ ಚಾಲಕರಾದ ಗುರುಮೂರ್ತಿ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
ಚಿತ್ರ ೧೯ ಕೆ.ಎಲ್.ಆರ್. ೦೨ : ಕಾಮಸಮುದ್ರಂ ಪೋಲಿಸರು ವಶಪಡಿಸಿಕೊಂಡ ೪ ದ್ವಿಚಕ್ರ ವಾಹನಗಳೊಂದಿಗೆ ಕಾಮಸಮುದ್ರಂ ಪೊಲೀಸರು.