ಕಾನೂನು ಸುವ್ಯವಸ್ಥೆ ಕಾಪಾಡುವ ಭರವಸೆ

BTP08Photo1 (1)
ಬೆಟ್ಟದಪುರ ಸಮೀಪದ ಸಾಲುಕೊಪ್ಪಲು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ ನೆರವೇರಿಸಿದರು. ಅಣ್ಣಯ್ಯಶೆಟ್ಟಿ, ಮಮತ, ರಾಣಿ, ಶಿವಪ್ಪ, ಕಾಂತೇಗೌಡ, ಎಸ್.ಸಿ ಕಾಂತೇಗೌಡ, ರಾಮಸ್ವಾಮಿ, ಗಿರೀಶ್ ಇದ್ದರು.
Published on


ಸಾಲುಕೊಪ್ಪಲಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ


ಬೆಟ್ಟದಪುರ: ದಬ್ಬಾಳಿಕೆಗೆ ಹೆದರದೆ ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.


ಸಮೀಪದ ಸಾಲುಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರು ಬುದ್ಧಿವಂತರಾಗಿದ್ದು, ದಬ್ಬಾಳಿಕೆಗೆ ಹೆದರುವ ಅಗತ್ಯವಿಲ್ಲ. ಪಿರಿಯಾಪಟ್ಟಣ ತಾಲೂಕಿನಲ್ಲಿ ಜಾತಿ, ಧರ್ಮ ಎಂಬ ಭಾವನೆ ಇಲ್ಲ. ಇದನ್ನು ಹಾಳು ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ತಾಲೂಕು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಭರವಸೆ ನೀಡಿದರು.


ಗ್ರಾಮದಲ್ಲಿನ ಸಮಸ್ಯೆ ನಿರ್ಮೂಲನೆ ಜತೆಗೆ ದಬ್ಬಾಳಿಕೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು ಎಂದರು.


ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಸದಸ್ಯೆ ರಾಣಿ, ಮಾಜಿ ಅಧ್ಯಕ್ಷ ಶಿವಪ್ಪ, ಮಾಜಿ ಸದಸ್ಯರಾದ ಕಾಂತೇಗೌಡ, ಎಸ್.ಸಿ.ಕಾಂತೇಗೌಡ, ರಾಮಸ್ವಾಮಿ, ಎಪಿಎಂಸಿ ನಿರ್ದೇಶಕ ಗಿರೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಹಸೀಲ್ದಾರ್ ಕೆ.ಚಂದ್ರಮೌಳಿ, ಕಂದಾಯ ನಿರೀಕ್ಷಕ ಆನಂದ್, ಎಂಜಿನಿಯರ್‌ಗಳಾದ ಮಲ್ಲಿಕಾರ್ಜುನ್, ಮೇಘನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net