

ಅರಕಲಗೂಡು: ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿ ಸಾಮಾನ್ಯ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನಲ್ಲಿ ಕಳೆದ 13 ದಿನಗಳ ಕಾಲ ನಡೆದ ಅಪರಿಮಿತ ಕಾನೂನು ಅರಿವು ಮೂಲಕ ನಾಗರೀಕ ಸಬಲೀಕರಣ ಆಂದೋಲನ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಜನತೆಗೆ ಸದುಪಯೋಗವಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಫರ್ ತಿಳಿಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಆಂದೋಲನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವು, ಕಾರ್ಯಕ್ರಮ ಆಯೋಜಿಸಲು ನೆರವಾದ ವಿವಿಧ ಇಲಾಖೆ, ಸಂಘ ಸಂಸ್ಥೆಗಳಿಗೆ ಕೃತಜ್ಞತೆ ತಿಳಿಸಿದರು. ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಜನತಾ ನ್ಯಾಯಾಲಯಗಳ ಮೂಲಕ ಬಗೆಹರಿಸಿ ಕೊಂಡಾಗ ಹಣ, ಸಮಯ ಎರಡೂ ಉಳಿತಾಯವಾಗುವ ಸಂಗಡ ಪರಸ್ಪರರಲ್ಲಿ ವಿಶ್ವಾಸ, ಸ್ನೇಹ ಮುಂದುವರೆದು ಶಾಂತಿಯ ವಾತಾವರಣ ನಿರ್ಮಾಣ ವಾಗುತ್ತದೆ. ಜನರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಹೆಚ್ಚುವರಿ ನ್ಯಾಯಾಧೀಶರಾದ ಚೇತನಾ, ರಘು, ವಕಿಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ದೇವರಾಜ್, ಖಜಾಂಚಿ ಮಹಮದ್ ಇರ್ಷಾದ್, ವಕೀಲ ಶಂಕರಯ್ಯ, ಜನಾರ್ಧನ ಗುಪ್ತಾ, ಆರ್.ಕೆ. ಮಂಜುನಾಥ್ ಇದ್ದರು.
ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಮುಂದೆ 900 ಪ್ರಕರಣಗಳು ಬಂದಿದ್ದು ಇದರಲ್ಲಿ 294 ಪ್ರಕರಣಗಳನ್ನು ರಾಜೀ ಸಂದಾನದ ಮೂಲಕ ಇತ್ಯರ್ಥ ಗೊಳಿಸಲಾಯಿತು.