ಕಾಡಾನೆ ದಾಳಿಯಿಂದ ಬೆಳೆ ನಷ್ಟ

8 RPT 2 elephant
ರಿಪ್ಪನ್‌ಪೇಟೆ ಸಮೀಪದ ಆಲುವಳ್ಳಿಯಲ್ಲಿ ಕಾಡಾನೆಗಳ ದಾಳಿಯಿಂದ ನಷ್ಟವಾದ ಬೆಳೆ.
Published on

ರಿಪ್ಪನ್‌ಪೇಟೆ: ಅರಸಾಳು ಅರಣ್ಯ ವಲಯ ಹಾಗೂ ಸಿರಿಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ತೋಟ, ಗದ್ದೆಗಳಿಗೆ ಮಂಗಳವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿವೆ.

ಕೆಲವು ದಿನಗಳಿಂದ ದಾಳಿ ಮಾಡಿ ಬೆಳೆ ಹಾನಿ ಮಾಡುತ್ತಿರುವ ಕಾಡಾನೆಗಳು ಅರಸಾಳು ಅರಣ್ಯ ವಲಯ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಸರ್ವೇ ನಂ.119ರಲ್ಲಿ ದೊರೆಸ್ವಾಮಿ, ಟೀಕನಾಯ್ಕ, ಚಂದ್ರಶೇಖರ, ಮಂಜನಾಯ್ಕ, ಪರಶುರಾಮ, ಹರೀಶ ಅವರ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ ಹಾಗೂ ಅಡಕೆ ಬೆಳೆಗಳನ್ನು ಹಾನಿ ಮಾಡಿವೆ.

ಸಿರಿಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಗುಬ್ಬಿಗ ಗ್ರಾಮದ ರಾಜಪ್ಪ, ಅಡ್ಡೇರಿಯ ಕಿರುವಾಸೆ ಗೋಪಾಲ ಅವರ ತೋಟಗಳಿಗೆ ದಾಳಿ ಮಾಡಿ ಅಡಕೆ, ತೆಂಗು, ಬಾಳೆ ಬೆಳೆ ಹಾನಿ ಮಾಡಿವೆ. ಆಲುವಳ್ಳಿ ಭಾಗದಲ್ಲಿ ಐದಾರು ಆನೆಗಳ ಹಿಂಡು ದಾಳಿ ನಡೆಸುತ್ತಿದ್ದರೆ, ಅಡ್ಡೇರಿ ಭಾಗದಲ್ಲಿ ಒಂದೆರಡು ಆನೆಗಳು ಇವೆ ಎಂಬ ಮಾಹಿತಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net