ಕಾಡಾನೆ ದಾಳಿಗೆ ಬೆಳೆ ನಾಶ

18 nrp 2 elephant
ಎನ್.ಆರ್.ಪುರ ತಾಲೂಕು ಚೆನಮಣೆಯ ತೋಟದಲ್ಲಿ ಒಂಟಿ ಸಲಗ ತೆಂಗಿನ ಮರವನ್ನು ಮುರಿದು ಬೀಳಿಸಿರುವುದು
Published on

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂನ ಚೆನಮಣೆಯ ಸೋಮಣ್ಣ ಎಂಬುವರ ತೋಟಕ್ಕೆ ಒಂಟಿ ಸಲಗ ಸೋಮವಾರ ರಾತ್ರಿ ದಾಳಿ ಮಾಡಿ ಒಂದು ತೆಂಗಿನಮರ, 20 ಅಡಕೆ ಮರ ಹಾಗೂ 50ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶ ಮಾಡಿದೆ.

ರಾತ್ರಿ 11ರ ಸುಮಾರಿಗೆ ಸೋಮಣ್ಣ ಅವರ ಮನೆ ಮುಂಭಾಗದ ಗೇಟಿನ ಮೂಲಕವೇ ಒಂಟಿ ಸಲಗ ನುಗ್ಗಿ ರಾತ್ರಿಯಿಡೀ ತೋಟದಲ್ಲೇ ಉಳಿದು ಬಾಳೆ, ಅಡಕೆ, ತೆಂಗಿನ ಮರಗಳಿಗೆ ಹಾನಿ ಮಾಡಿ ಬೆಳಗ್ಗೆ ಸಮೀಪದ ಅರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿಕೊಂಡಿದೆ.

ಆನೆ ದಾಳಿಗೆ ವಿದ್ಯುತ್ ತಂತಿ ತುಂಡಾಗಿದೆ. ಕಾಡಾನೆ ದಾಳಿ ತಪ್ಪಿಸಲು ಸೋಮಣ್ಣ ಅವರು ತೋಟದ ಸುತ್ತಲೂ ಐಬೆಕ್ಸ್ ಬೇಲಿ ನಿರ್ಮಿಸಿದ್ದರು. ಆದರೆ ಅವರು ರಾತ್ರಿ ಮಡಬೂರು ಜಾತ್ರೆಗೆ ಹೋಗಿದ್ದರಿಂದ ಗೇಟನ್ನು ತೆರೆದಿಟ್ಟಿದ್ದರು. ಒಂಟಿ ಸಲಗ ಐಬೆಕ್ಸ್ ಬೇಲಿಯ ಹತ್ತಿರ ಹೋಗಿಲ್ಲ. ಮನೆಯವರು ಬೆಳಗ್ಗೆ ತೋಟಕ್ಕೆ ಹೋದಾಗ ಕಾಡಾನೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net