ಕಾಂಗ್ರೇಸ್‌ನಲ್ಲಿ ಮುಗಿಯದ ಭಿನ್ನಮತ / ಜಿಲ್ಲಾಧ್ಯಕ್ಷರ ಅಸಹಾಯಕ ಹೇಳಿಕೆ / ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿನ ಭಿನ್ನಮತ ಮುಗಿಯದ ಅಧ್ಯಾಯವಾಗಿದೆ. ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರ ಅಸಹಾಯಕ ಹೇಳಿಕೆ ಕಾಂಗ್ರೆಸ್ ಪಕ್ಷದ ಅಸಮಾದಾನಕ್ಕೆ ಕಾರಣವಾಗಿದೆ.

ಆ.೧೭ ರಂದು ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿಯ ೧೭ ವಾರ್ಡುಳಿಗೆ ಚುನಾವಣೆ ನಡೆಯಲಿದೆ. ಆ.೫ ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಕಾಂಗ್ರೆಸ್‌ನಿAದ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ಬಿ.ಫಾರಂಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಈಗಾಗಲೇ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕೈಗೆ ತಲುಪಿಸಲಾಗಿದೆ.

ಗುರುವಾರ ಬಿ.ಫಾರಂಗಳನ್ನು ಹಸ್ತಾಂತರ ಸಂದರ್ಭದಲ್ಲಿ ಹಾಗೂ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ ಮಾತನಾಡಿ, ನಾನು ಜಿಲ್ಲಾಧ್ಯಕ್ಷನಾದರೂ ಸ್ಥಳೀಯ ಶಾಸಕರು ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇರುವುದನ್ನು ಸಾಬೀತುಪಡಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಮತ್ತು ಕೋಮುಲ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಭಿನ್ನಮತ ಬಹಿರಂಗಗೊAಡಿತ್ತು. ಆದರೂ ಎರಡು ಸಹಕಾರ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಕಳೆದ ಒಂದು ವಾರದಿಂದ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಕಾಂಗ್ರೆಸ್ ಪಕ್ಷ ಒಂಟಿಯಾಗಿ ಪ್ರಚಾರ ಕೈಗೊಂಡರೆ ಜೆಡಿಎಸ್, ಬಿಜೆಪಿ ದೋಸ್ತಿ ಜಂಟಿಯಾಗಿ ಪ್ರಚಾರ ಕೈಗೊಂಡಿದೆ. ನಾಮ ಪತ್ರಗಳ ಸಲ್ಲಿಕೆಯ ನಂತರ ಪ್ರಚಾರದ ವೇಗ ಮತ್ತಷ್ಟು ಚುರುಕು ಗೊಳ್ಳಲಿದೆ.

ಕೋಟ್

ಕಳೆದ ಒಂದು ವಾರದಿಂದ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ನಾನು ಸೇರಿದಂತೆ ಆ ಭಾಗದ ಕಾಂಗ್ರೆಸ್ ಮುಖಂಡರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ, ಪಕ್ಷಕ್ಕೆ ಬರುವವರನ್ನು ಆಹ್ವಾನಿಸಿಕೊಂಡು ೧೭ ವಾರ್ಡುಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕೆಂದು ಪ್ರಚಾರ ಕೈಗೊಂಡಿದ್ದೇವೆ. ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಅವರ ಪಟಾಲಂ ಒಂದು ದಿನವೂ ವಾರ್ಡುಗಳಿಗೆ ಭೇಟಿ ನೀಡದೆ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷಕ್ಕೆ ಕೆಲಸ ಮಾಡದೆ ಇರುವವರನ್ನು ಪಕ್ಕದಲ್ಲಿ ಕುಳ್ಳರಿಸಿಕೊಂಡು ಮಾತನಾಡುವುದರಿಂದ ಪ್ರಯೋಜನವಿಲ್ಲ. ಶಾಸಕರ ಬಳಿ ಗೌರವವಿಲ್ಲ ಎಂದರೆ ಅವರು ಅಧ್ಯಕ್ಷರಾಗಿ ಏಕೆ ಮುಂದುವರಿದಿದ್ದಾರೆ. ಶಾಸಕರುಗಳ ಬಳಿ ಗೌರವಹಿತವಾಗಿ ನಡೆದುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆಗಳನ್ನು ನೀಡಬಾರದು.

-ಎಂ.ಎಲ್.ಸಿ. ಅನಿಲ್‌ಕುಮಾರ್

ಕೋಟ್

ವೇಮಗಲ್-ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣಾ ಪ್ರಚಾರಕ್ಕೆ ಇದುವರೆವಿಗೂ ನನಗೆ ಆಹ್ವಾನವಿಲ್ಲ. ಕರೆದರೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಹೈಕಮ್ಯಾಂಡ್‌ನಿAದ ಬಿ.ಫಾರಂಗಳನ್ನು ಕಳುಹಿಸಿಕೊಡಲಾಗಿತ್ತು. ಶಾಸಕ ಕೊತ್ತೂರು ಮಂಜುನಾಥ್ ರವರಿಗೆ ದೂರವಾಣಿಯ ಮೂಲಕ ತಿಳಿಸಿದಾಗ ನನ್ನ ಅಭಿಮಾನಿ ಮೈಲಾಂಡಹಳ್ಳಿ ಮುರಳಿರವರಿಗೆ ನೀಡಿ ಪರವಾಗಿಲ್ಲ. ಅವುಗಳನ್ನು ನಾನು ಪಾಕಿಸ್ತಾನದಲ್ಲಿ ಇರುವವರಿಗೆ ಹಂಚುವುದಿಲ್ಲ ಎಂದು ಉದಾಸೀನವಾಗಿ ಮಾತನಾಡಿದರು. ಅದಕ್ಕೆ ನಾನು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯ್‌ಕುಮಾರ್ ಬಳಿ ನೀಡಿದ್ದೇನೆ. ಪಕ್ಷಕ್ಕೆ ನಾನು ಮುಜುಗರ ಮಾಡುವುದಿಲ್ಲ. ನಾನು ಅಧ್ಯಕ್ಷನೆಂಬುದನ್ನು ಮರೆತು ನನ್ನನ್ನು ಆಹ್ವಾನಿಸದೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೇಸ್ ಕಛೇರಿಯ ಸಭೆಯಲ್ಲಿ ಎಲ್ಲರೂ ಪಕ್ಕದಲ್ಲಿ ಕೂರುತ್ತಾರೆ. ನಾನು ಬೇಡ ಎಂದು ಹೇಳಲು ಹೇಗೆ ಸಾಧ್ಯ?

-ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ

ಚಿತ್ರ ೦೧ ಕೆ.ಎಲ್.ಆರ್. ೦೧ : ಕಾಂಗ್ರೇಸ್ ಪಕ್ಷದ ಚಿಹ್ನೆ

ಚಿತ್ರ ೦೧ ಕೆ.ಎಲ್.ಆರ್. ೦೧ಎ : ಎಂ.ಎಲ್.ಸಿ. ಅನಿಲ್‌ಕುಮಾರ್ ರವರ ಭಾವಚಿತ್ರ

ಚಿತ್ರ ೦೧ ಕೆ.ಎಲ್.ಆರ್. ೦೧ಬಿ : ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net