

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಯುದ್ಧ ಸಾರಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವರು ತಿರುಗಿ ಬಿದ್ದಿದ್ದಾರೆ(War against Congress government: Ministers hit back at Kumaraswamy's statement).
ನನ್ನ ಹತ್ರ ಟನ್ ಗಟ್ಟಲೆ ದಾಖಲೆಗಳಿವೆ. ಸುಖಾಸುಮ್ಮನೆ ನನ್ನನ್ನು ಕೆಣಕಬೇಡಿ, ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ. ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ಧ ಆರಂಭ ಮಾಡುತ್ತಿದ್ದೇನೆ ಎಂದು ಶನಿವಾರ ಕುಮಾರಸ್ವಾಮಿ ಗುಡುಗಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ, ರಾಜಕೀಯ ಯುದ್ಧ ಅಂದರೆ ಬಂದೂಕು ಹಿಡಿದು ಮಾಡ್ತಾರಾ? ಯುದ್ಧ ಅಂದರೆ ಟೀಕೆ-ಟಿಪ್ಪಣಿ. ಅವರ ಟೀಕೆಗಳಿಗೆ, ಪ್ರಶ್ನೆಗಳಿಗೆ
ಸರ್ಕಾರ ಉತ್ತರ ಕೊಡಲು ಸಮರ್ಥವಿದೆ. ಅವರು ದಾಖಲೆ ಬಿಡುಗಡೆ ಮಾಡಲಿ ಆಮೇಲೆ ಉತ್ತರ ಕೋಡುತ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಾರ್ ಮಾಡಲಿ ಯಾರು ಬೇಡ ಅಂದಿದ್ದಾರೆ.ಯಾಕೆ ಇಷ್ಟು ದಿನ ಸುಮ್ಮನಿದ್ದರು? ಯಾರಿಗೆ ಯಾಕೆ ಭಯ ಪಡೆಬೇಕು. ನಾವು ಮಾಡುತ್ತಿರುವುದು ತಪ್ಪು, ಕಾನೂನು ವಿರುದ್ಧ ಎಂದು ಗೊತ್ತಿದ್ದರೆ ಏಕೆ ಇಷ್ಟು ದಿನ ಸುಮ್ಮನಿದ್ದರು ಎಂದು ಕೆಣಕಿದ್ದಾರೆ.
ದಾಖಲೆ ಬಹಿರಂಗ ಪಡಿಸಲಿ, ಯಾರು ಬೇಡ ಎನ್ನುತ್ತಾರೆ. ನಾವು ಯಾರಿಗೆ ಯಾಕೆ ಭಯ ಪಡೆಬೇಕು,140 ಜನ ಇದ್ದೇವೆ. ಕುಮಾರಸ್ವಾಮಿಗೆ ಸರ್ಕಾವನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.