

ಲಿಂಗದಹಳ್ಳಿ: ಬಳ್ಳಾವರ ಗ್ರಾಮದಲ್ಲಿ 12 ಲಕ್ಷ ರೂ. ಅನುದಾನದಲ್ಲಿ ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಉಳಿದಿರುವ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಲಾಗುವುದು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ತಿಳಿಸಿದರು.
ಬಳ್ಳಾವರ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಚಾಲನೆ ನೀಡಿ ಮಾತನಾಡಿ, ಬಳ್ಳಾವರ ಗ್ರಾಮ ಸೇರಿದಂತೆ ಲಿಂಗದಹಳ್ಳಿ ಹೋಬಳಿಯ ಬಹುತೇಕ ಗ್ರಾಮಗಳ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಮಾಡಲು ಶಾಸಕ ಜಿ.ಎಚ್.ಶ್ರೀನಿವಾಸ್ ಅನುದಾನ ನೀಡುತ್ತಿದ್ದಾರೆ. ಕಾಂಕ್ರಿಟ್ ರಸ್ತೆ ಜತೆಗೆ ಬಾಕ್ಸ್ ಚರಂಡಿ ನಿರ್ಮಾಣ, ಡಾಂಬರ್ ರಸ್ತೆ ನಿರ್ಮಾಣ, ವಿವಿಧ ರಸ್ತೆಗಳ ಸೇತುವೆಗಳ ನಿರ್ಮಾಣ ಸೇರಿದಂತೆ ಅನೇಕ ಮೂಲ ಸೌಲಭ್ಯಗಳನ್ನು ಎಲ್ಲ ಗ್ರಾಮಗಳಿಗೂ ಆದ್ಯತೆ ಮೇರೆಗೆ ಒದಗಿಸಲಾಗುವುದು ಎಂದು ಹೇಳಿದರು.
ಲಿಂಗದಹಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಟಿ.ಆಂಡಿಗೌಡ, ನಂದಿಬಟ್ಟಲು ಗ್ರಾಪಂ ಮಾಜಿ ಉಪಾಧ್ಯಕ್ಷೆ ಪ್ರೇಮಾ ರವಿ, ಗ್ರಾಮಸ್ಥರಾದ ಮಣಿಕಂಠ, ಡಾ. ರಂಗನಾಥ, ರಮೇಶ್ ಇತರರಿದ್ದರು.