ಕಷ್ಟದಲ್ಲಿರುವವರೆಗೆ ಸೇವೆ ಸಲ್ಲಿಸುವುದೇ ಮಾನವೀಯತೆ

oplus_2
oplus_2
Published on

ಚಿತ್ರದುರ್ಗ: ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಷಿ ವಿದ್ಯಾರ್ಥಿಗ ಳಿಗೆ ಸಲಹೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಮತ್ತಿತರ ಸಂಘ-ಸಂಸ್ಥೆ ಸಹಯೋಗದಲ್ಲಿ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಎರಡು ದಿನಗಳ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ಹಾಗೂ ಉಚಿತ ಶ್ರವಣ ಸಾಧನ, ವೀಲ್‌ಚೇರ್ ಮತ್ತು ಪ್ರಥಮ ಚಿಕಿತ್ಸಾ ಕಿಟ್‌ಗಳ ವಿತರಣಾ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಬಾರಿಯ ರೆಡ್‌ಕ್ರಾಸ್‌ನ ಘೋಷವಾಕ್ಯ ನಮ್ಮ ನಡಿಗೆ ಮಾನವೀಯತೆ ಕಡೆಗೆ ಎಂಬುದಾಗಿದ್ದು, ಪರಸ್ಪರ ಕರುಣೆ ಇರಬೇಕು. ಕಷ್ಟ ದಲ್ಲಿರುವವರೆಗೆ ಸೇವೆ ಸಲ್ಲಿಸುವುದೇ ಮಾನವೀಯತೆಯಾಗಿದೆ. ಜೀವನದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಒಳತಿಗಾಗಿ ಶ್ರಮಿಸಬೇಕೆಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸಭಾಪತಿ ಬಸ್ರೂರ್ ರಾಜೀವ್ ಶೆಟ್ಟಿ ಮಾತನಾಡಿ, ದೇಶದಲ್ಲಿರುವ ಶೇ.60 ಯುವ ಜನರು ಸಾಕಷ್ಟು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದರು. ರೆಡ್‌ಕ್ರಾಸ್ ಸಂಸ್ಥೆಯಿಂದ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶ್ರವಣ ಸಾಧನ ಮತ್ತು ವೀಲ್‌ಚೇರ್‌ಗಳನ್ನು ವಿತರಿಸಲಾಯಿತು.

ರೆಡ್‌ಕ್ರಾಸ್ ರಾಜ್ಯ ಶಾಖೆ ಸಹಾಯಕ ಕಾರ‌್ಯದರ್ಶಿ ಉಮಾಕಾಂತ್, ಸದಸ್ಯ ಎಂ.ಕೆ.ಅನಂತರೆಡ್ಡಿ, ಜಿಲ್ಲಾ ಶಾಖೆ ಸಭಾಪತಿ ಗಾಯತ್ರಿ ಶಿವರಾಮ್, ಉಪ ಸಭಾಪತಿ ಇ.ಅರುಣ್‌ಕುಮಾರ್, ಎನ್.ಮಜಹರ್‌ಉಲ್ಲಾ, ಖಜಾಂಚಿ ಎಸ್.ವೀರೇಶ್ ಸೇರಿದಂತೆ ಕಾರ‌್ಯಕಾರಿ ಸಮಿತಿ ಸದಸ್ಯರು ಇದ್ದರು.

ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಸಿದ್ದರಾಮ ಚೆನ್ನಗೊಂಡ, ಪತ್ರಾಂಕಿತ ವ್ಯವಸ್ಥಾಪಕ ಆರ್.ನಾಗೇಂದ್ರಬಾಬು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ರಾಷ್ಟ್ರಮಟ್ಟದ ತರಬೇತುದಾರ ಡಾ.ವಿಎಲ್‌ಎಸ್ ಕುಮಾರ್, ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net