

ಕಳಸ: ಎಡದಾಳು ಬೋವಿಪಾಲ್‌ನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಕಳಸ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಕೋಟೆಹೊಳೆ, ರವಿ ಗಣಪತಿಕಟ್ಟೆ, ನಿತೇಶ್ ಮೇಲಂಗಡಿ ಬಂಧಿತರು.
ಬೋವಿಪಾಲ್‌ನ ಸಾಬಿತ್ ಎಂಬುವರ ಮನೆಗೆ ನುಗ್ಗಿದ್ದ ಕಳ್ಳರು ಬೀರುವಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣ, 17 ಸಾವಿರ ರೂ. ಮೌಲ್ಯದ ಅಡಕೆಯನ್ನು ಕದ್ದೊಯ್ದಿದ್ದರು. ಜ.24ರಂದು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳಿಂದ ಒಂದು ಜತೆ ಚಿನ್ನದ ಜುಮಕಿ ಹಾಗೂ ಮಾಟಿ, ಒಂದು ಜತೆ ಬೆಳ್ಳಿಯ ಕಾಲುಗೆಜ್ಜೆ, 9 ಮೂಟೆ ಗೋಟು ಅಡಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಕಳಸ ಪಿಎಸ್‌ಐ ಬಾಬು ಅಗೇರ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.