ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ :
ವಿದ್ಯೆಯೊಂದಿದ್ದರೆ ಎಲ್ಲವೂ ಮನುಷ್ಯನಿಗೆ ಸುಲಭವಾಗಿ ಸಿಗುತ್ತದೆ, ವಿದ್ಯೆಯೇ ದೊಡ್ಡ ಆಸ್ತಿ, ಪ್ರಾರಂಭದ ೨೫ ವರ್ಷಗಳಲ್ಲಿ ವಿದ್ಯೆಯನ್ನು ಸರಿಯಾಗಿ ಕಲಿತರೆ ಮತ್ತು ಕಲಿತ ವಿದ್ಯೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಮುಂದಿನ ೭೫ ವರ್ಷಗಳ ಜೀವನ ಹಸನಾಗಿರುತ್ತದೆ ಎಂದು ಆದಿಚುಂಚನಗಿರಿ ಶ್ರೀ ಮಠದ ಶ್ರೀ.ಶ್ರೀ.ಶ್ರೀ.ಡಾ.ನಿರ್ಮಲಾನಂದ ಮಹಾಸ್ವಾಮೀಜಿ ಹೇಳಿದರು.
ಶ್ರೀನಿವಾಸಪುರ ತಾಲ್ಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ವೇಣುಗೋಪಾಲಸ್ವಾಮಿ ಹಾಗೂ ಕರಗದಮ್ಮ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ವೇಣುಗೋಪಾಲಸ್ವಾಮಿ ಕರಗದಮ್ಮ ದೇವಾಲಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ರಾಜ್ಯದಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ಬಹು ದೊಡ್ಡ ಆಸ್ತಿಯಾಗಬೇಕು, ಈ ನಿಟ್ಟಿನಲ್ಲಿ ಸಮಾಜದ ಮುಂದಿನ ಯುವ ಪೀಳಿಗೆ ಸಮಾಜದ ಆಧಾರ ಸ್ಥಂಭಗಳಾಗಿ ನಿರ್ಮಾಣವಾಗಬೇಕು ಎಂದರು.
ಜೀವನದಲ್ಲಿ ತಿಳಿಸಿಕೊಡುವುದು ಹಾಗೂ ಬೆಳೆಸಿಕೊಳ್ಳುವುದನ್ನು ಕಲಿಸಿಕೊಡುವುದು ಧರ್ಮ. ಈ ಎರಡನ್ನು ಬಿಟ್ಟು ಬೇರಯದಕ್ಕೆ ಬೆಳೆಸಿಕೊಂಡರೆ ಧರ್ಮವನ್ನು ದಾರಿ ತಪ್ಪಿಸಿದಂತಾಗುತ್ತದೆ. ಮನುಷ್ಯನಿಗೆ ನೀಡಿರುವ ವಿಶೇಷ ಮನಸ್ಸು, ಬುದ್ಧಿ ಪ್ರಜ್ಞೆ ಬಳಸಿಕೊಂಡವರು ಆಧುನಿಕ ಬದುಕನು ಸಮೃದ್ಧವಾಗಿಸಿಕೊಂಡು ತುಂಬಾ ಆನಂದವಾಗಿರುತ್ತಾರೆ ಎಂದರು.
ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಗ್ರಾಮಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರಗಳ ನಿರ್ಮಾಣ ಮತ್ತು ಪುನರ್ ನಿರ್ಮಾಣ ಕಾರ್ಯಗಳು ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ, ಗ್ರಾಮಗಳಲ್ಲಿ ಗ್ರಾಮಸ್ಥರ ಸಹಕಾರದಿಂದ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯಕ್ರಮಗಳು ನಡೆಯುವುದರಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರು ಇಂತಹ ದೈವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಡಿಮೆಯಾಗಿದೆ. ಜನಪ್ರತಿನಿಧಿಗಳ ಮೇಲೆ ಹೆಚ್ಚಾಗಿ ಅವಲಂಭಿತರಾಗದೆ ಗ್ರಾಮಸ್ಥರೇ ಖದ್ದು ಉಸ್ತುವಾರಿಗಳನ್ನು ವಹಿಸಿಕೊಳ್ಳುವುದರಿಂದ ನಿಜವಾದ ಅರ್ಥ ಸಿಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಗಾಂಡ್ಲಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ನೂತನ ಹಾಲು ಡೈರಿಗೆ ಶ್ರೀ.ಶ್ರೀ.ಶ್ರೀ.ಡಾ.ನಿರ್ಮಲಾನಂದ ಮಹಾಸ್ವಾಮೀಜಿಗಳು ಚಾಲನೆ ನಿಡಿದರು.
ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಡಿವೈಎಸ್‌ಪಿ ನಂದಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೋರವಿನಕೊಳ್ಳ, ದಯಾನಂದ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಪ್ತ ಸಹಾಯಕ ಡಾ.ರಾಮೇಗೌಡ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ.ಮುನಿರಾಜು, ಅಶ್ವಥ್ ನಾರಾಯಣಗೌಡ, ಪ್ರಾಥಮಿಕ ಶಾಲಾ ಶಿಕ್ಷಣದ ಮಾಜಿ ರಾಜ್ಯ ಉಪಾಧ್ಯಕ್ಷ ಕೆ.ಎಚ್.ಸಂಪತ್ ಕುಮಾರ್, ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ದಳಸನೂರು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಶಶಿಕುಮಾರ್, ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಸ್ಥಳೀಯ ಶಾಖೆಯ ಉಪವಸ್ಥಾಪಕ ಮುನಿರಾಜು, ವಿಸ್ತೀರ್ಣ ಅಧಿಕಾರಿ ವಿನಾಯಕ್, ನರಸಿಂಹರಾಜು, ಶಂಕರ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರಾಜಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ವೇಣುಗೋಪಾಲಸ್ವಾಮಿ ಹಾಗೂ ಕರಗದಮ್ಮ ಸೇವಾ ಟ್ರಸ್ಟ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಊರಿನ ಗ್ರಾಮಸ್ಥರು ಉಪಸ್ಥಿರಿದ್ದರು.
ಚಿತ್ರ ೧೧ ಕೆ.ಎಲ್.ಆರ್. ೦೪ : ಗಾಂಡ್ಲಹಳ್ಳಿ ಗ್ರಾಮದಲ್ಲಿ ವೇಣುಗೋಪಾಲಸ್ವಾಮಿ ಕರಗದಮ್ಮ ದೇವಾಲಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀ.ಶ್ರೀ.ಶ್ರೀ.ಡಾ.ನಿರ್ಮಲಾನಂದ ಮಹಾಸ್ವಾಮೀಜಿಗಳು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮುಂತಾದವರು ಮಾತನಾಡಿದರು.