ಕಲಾ ವೈಭವಕ್ಕೆ ವಿಶ್ವಕರ್ಮ ಕೊಡುಗೆ ಅಪಾರ

17NGD2
Published on

ಮೈಸೂರು : ಜಗತ್ತಿನ ವಾಸ್ತುಶಿಲ್ಪ ಹಾಗೂ ಕಲಾ ವೈಭವಕ್ಕೆ ಮಹರ್ಷಿ ವಿಶ್ವಕರ್ಮ ಅವರ ಕೊಡುಗೆ ಅಪಾರವಾಗಿದೆ ಎಂದು ಗ್ರೇಡ್-2 ತಹಸೀಲ್ದಾರ್ ಭೈರಯ್ಯ ಹೇಳಿದರು.

ನಂಜನಗೂಡು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಿಶ್ವಕರ್ಮ ಅವರನ್ನು ಸೂರ್ಯನ 7ನೇ ಕಿರಣವೆಂದೂ ಜನರು ನಂಬಿದ್ದಾರೆ. ವಿಶ್ವಕರ್ಮ ಸಮುದಾಯ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಿತರಾಗುವ ಜತೆಗೆ ವೃತ್ತಿಯಲ್ಲೇ ನೈಪುಣ್ಯತೆ ಸಾಧಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.


ವಿಶ್ವಕರ್ಮ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚಂದ್ರು ಮಾತನಾಡಿ, ವಿಶ್ವಕರ್ಮ ಸಮುದಾಯದವರು ಎಲ್ಲ ವರ್ಗದೊಂದಿಗೆ ಬೆರೆತು, ಜನರ ಜೀವನೋಪಾಯಕ್ಕೆ ಅವಶ್ಯಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ. ಆದರೆ ಜನಾಂಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬಹಳ ಹಿಂದುಳಿದಿದೆ. ಜತೆಗೆ ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಸ್ಥಾನಮಾನಗಳಿಂದಲೂ ವಂಚಿತರಾಗಿದೆ. ಹೀಗಾಗಿ ಸಮುದಾಯದು ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಗೆ ಸಂಘಟನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.


ಮುಖ್ಯ ಭಾಷಣಕಾರ ಭುಜಂಗಯ್ಯ ಮಾತನಾಡಿ, ವಿಶ್ವಕರ್ಮ ಜಗತ್ತಿನ ಸೃಷ್ಟಿಕರ್ತ. ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು ಎಂದರು. ಶಿರಸ್ತೇದಾರ್ ಶ್ರೀಪಾದು, ತಾಲೂಕು ವಿಶ್ವಕರ್ಮ ಸಂಘದ ಗೌರವಾಧ್ಯಕ್ಷ ಸಿದ್ದಾಚಾರ್, ಉಪಾಧ್ಯಕ್ಷ ಶ್ರೀಕಂಠ, ಗೋಪಾಲಕೃಷ್ಣ, ಲಾಟರಿ ಕೆ.ಎನ್.ವೆಂಕಟೇಶ್, ವಾಗೇಶ, ನಾಗರಾಜು, ಪುಟ್ಟಣ್ಣ, ಕೆ.ಎಸ್.ರಾಜು, ರಘು, ಸ್ವಾಮಣ್ಣ, ಚೆಲುವರಾಜು, ಈಶ್ವರ್, ಗೋವಿಂದ, ಚಂದ್ರಶೇಖರ್, ನಾಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net