ಕಲಬುರಗಿಯಲ್ಲಿ ವಿಜಯಪುರ ಜಿಲ್ಲೆಯ ಪಂಚಾಯತಿ ಸದಸ್ಯರ ಕಿಡ್ನಾಪ್

Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಖಾಸಗಿ  ಅತಿಥಿ ಗೃಹದಲ್ಲಿದ್ದ ಗ್ರಾಪಂ ಸದಸ್ಯರನ್ನು ಕಾರಿನಲ್ಲಿ
ಬಂದವರು ಕಿಡ್ನಾÈಪ್ ಮಾಡಿಕೊಂಡು ಹೋದ ಘಟನೆ ನಡೆದಿದೆ.
ಕಾಶಿರಾಯ ಬಿರಾದಾರ, ಬಸಲಿಂಗಪ್ಪ ಜಾಯಿ ಮತ್ತು ಪ್ರಕಾಶ ರಾಠೋಡ ಎಂಬುವರೇ ಅಪಹರಣಕ್ಕೊಳಗಾದ ಗ್ರಾಪಂ ಸದಸ್ಯರು ಎಂದು  ಅವರ ಜತೆಗಿದ್ದ ಗ್ರಾಪಂ ಸದಸ್ಯ ಮಹ್ಮದ ರಫೀಕ್ ಸೈಯದ್ ಪಟೇಲ್ ದೂರಿದ್ದಾರೆ. ಅಪಹರಿಸಿದವರು ಹಾಗೂ ಅಪಹರಣಕ್ಕೊಳಗಾದವರು ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಪಂ ಸದಸ್ಯರು.
ಏಳು ಜನ ಗ್ರಾಪಂ ಸದಸ್ಯರು ಸೇರಿಕೊಂಡು ಕಲಬುರಗಿಯ ದರ್ಗಾ ಪ್ರದೇಶದ ಲಾಡ್ಜ್ನಲ್ಲಿದ್ದಾಗ,ಚಂದ್ರಶೇಖರ ಹಸಕಿ ಎಂಬುವರು ಬಂದು ಕಿಡ್ನಾÈಪ್ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net