

ಸಂಸದ ಡಾ.ಜಾಧವ್ ಇತರರಿಗೆ ಕೇಂದ್ರ ಸಚಿವ ಗಡ್ಕರಿ ಭರವಸೆ |ಹುಮನಾಬಾದ್-ವಿಜಯಪುರ ಹೆದ್ದಾರಿ ಚತುಷ್ಪಥ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ರಿಂಗ್ ರೋಡ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರಿಂದ ಸಂಚಾರ ಕಷ್ಟಕರವಾಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕಲಬುರಗಿ ಬೈಪಾಸ್ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಕೇಂದ್ರ ಸಚಿವರ ದೆಹಲಿ ನಿವಾಸದಲ್ಲಿ ಬುಧವಾರ ಕರೆದಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಹೆz್ದÁರಿ ಮತ್ತು ಬೈಪಾಸ್ ಕಾಮಗಾರಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಡಾ.ಉಮೇಶ ಜಾಧವ್ ಇತರರು ಬೈಪಾಸ್ ಬಗ್ಗೆ ಪ್ರಸ್ತಾಪಿಸಿದಾಗ ಸ್ಪಂದಿಸಿದ ಸಚಿವರು, ಹೆದ್ದಾರಿ ಅಧಿಕಾರಿಗಳಿಂದ ವಿಸ್ತÈತ ವರದಿ ತರಿಸಿಕೊಂಡು ಅನುಷ್ಠಾನಗೊಳಿಸುವುದಾಗಿ ಹೇಳಿದರು.
ಅಗತ್ಯವಿರುವ ಭೂಮಿಯ ಅರ್ಧದಷ್ಟು ಸರ್ಕಾರಿ ಜಾಗ ಕೊಡಲು ಸಚಿವ ಜಾರಕಿಹೊಳಿ ಒಪ್ಪಿಕೊಂಡಿದ್ದರಿAದ ಕಲಬುರಗಿ ಬೈಪಾಸ್ ಕಾಮಗಾರಿಗೆ ಇದ್ದ ಅಡೆತಡೆ ನಿವಾರಣೆ ಆದಂತಾಗಿದೆ ಎಂದು ಸಂಸದ ಡಾ.ಜಾಧವ್ ತಿಳಿಸಿದರು.
ಚತುಷ್ಪಥವಾಗಿ ಮೇಲ್ದರ್ಜೆಗೆ
ಹುಮನಾಬಾದ್-ಕಲಬುರಗಿ-ವಿಜಯಪುರ ನಡುವೆ ವಾಹನ ಸಂಚಾರ ದಟ್ಟಣೆಯಿಂದ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಗಮನಸೆಳೆದ ಸಂಸದ ಡಾ.ಜಾಧವ್, ಬಾಪೂರ ಕ್ರಾಸ್‌ನಿಂದ ಚಿಂಚೋಳಿ ಮಾರ್ಗವಾಗಿ ಮೆಹಬೂಬನಗರ ರಾಷ್ಟಿçÃಯ ಹೆz್ದÁರಿ ಕೆಲಸ, ನನೆಗುದಿಗೆ ಬಿದ್ದಿರುವ ವಾಡಿ ಜಂP್ಷÀನ್ ಹತ್ತಿರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರ ಪ್ರಾರಂಭಿಸಲು ಕೋರಿದರು. ಅದಕ್ಕೆ ಸ್ಪಂದಿಸಿದ ಸಚಿವರು ರಾಷ್ಟಿçÃಯ ಹೆz್ದÁರಿ ಅಧಿಕಾರಿಗಳಿಗೆ ಈ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸುವAತೆ ಸೂಚಿಸಿದರು. ಅಲ್ಲದೆ ವಿಜಯಪುರ-ಹುಮನಾಬಾದ್ ಹೆದ್ದಾರಿಯನ್ನು ನಾಲ್ಕು ಪಥವಾಗಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸಂಸದರಾದ ಜಿ.ಎಂ. ಸಿz್ದೆÃಶ್ವರ, ಬಿ.ವೈ. ರಾಘವೇಂದ್ರ, ಕರಡಿ ಸಂಗಣ್ಣ, ಜಿ.ಎಸ್. ಬಸವರಾಜು, ರಾಷ್ಟಿçÃಯ ಹೆz್ದÁರಿ ಮುಖ್ಯಸ್ಥ ರವಿಪ್ರಸಾದ, ಬೆಂಗಳೂರು ಪ್ರಾದೇಶಿಕ ಅಧಿಕಾರಿಗಳಾದ ನರೇಂದ್ರ ಶರ್ಮ, ಮುಕೇಶಕುಮಾರ, ರಾಜ್ಯ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ವಂದನಾ ಗುರುನಾನಿ ಇತರರಿದ್ದರು.