ಕಬ್ಬಿನ ಹಂಗಾಮು ಯಶಸ್ಸಿಗೆ ಸಹಕರಿಸಿ- ಡಾ.ಪ್ರಭಾಕರ ಕೋರೆ

2Manjari1
Published on

ಮಾಂಜರಿ: ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯುವ ಹಂಗಾಮು ಯಶಸ್ಸಿಗೆ ರೈತರ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಬೇಕು ಎಂದು ಶಿವಶಕ್ತಿ ಶುಗರ್ಸ್ ಕಾರ್ಖಾನೆ ಪ್ರವರ್ತಕ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮನವಿ ಮಾಡಿದರು.

ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿರುವ ಶಿವಶಕ್ತಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮು ನಿಮಿತ್ತ ಬುಧವಾರ ಬಾಯ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿವಶಕ್ತಿ ಸಕ್ಕರೆ ಕಾರ್ಖಾನೆ ಈ ವರ್ಷ ಕಡಿಮೆ ಅವಧಿಯಲ್ಲಿ ಹೆಚ್ಚು ಕಬ್ಬು ಅರೆಯಲಿದ್ದು, ದಾಖಲೆ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸಲಿದೆ ಎಂದು ಹೇಳಿದರು.

ಕಾರ್ಖಾನೆ ಎಥೆನಾಲ್, ವಿದ್ಯುತ್ ಉತ್ಪಾದನೆ ಸೇರಿ ವಿವಿಧ ಯೋಜನೆಗಳನ್ನೂ ಹೊಂದಿದ್ದು, ಮುಂದಿನ ದಿನಗಳಲ್ಲಿ ಈ ಉತ್ಪಾದನೆಯನ್ನು ಹೆಚ್ಚಿಸಲು ಚಿಂತನೆ ನಡೆದಿದೆ ಎಂದರು. ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ನಿಡಸೋಸಿಯ ನಿಜಲಿಂಗೇಶ್ವರ ಶ್ರೀ, ಡಾ.ಪ್ರಭಾಕರ ಕೋರೆ, ಶಾಸಕ ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಚಿದಾನಂದ ಕೋರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಬಾಯ್ಲರ್ ಅಗ್ನಿ ಪ್ರದೀಪನ ನೆರವೇರಿಸಿದರು.

ಸಚಿನ ಪಾಟೀಲ, ಶೋಭಾ ಪಾಟೀಲ, ಆಶಾತಾಯಿ ಕೋರೆ, ಚಿದಾನಂದ ಕೋರೆ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕ ಭರತೇಶ ಬನವಣೆ, ಅಜಿತರಾವ್ ದೇಸಾಯಿ, ಮಲ್ಲಪ್ಪ ಮೈಶಾಲೆ, ಭರಮಗೌಡ ಪಾಟೀಲ, ಚೇತನ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಕಾತ್ರಾಳೆ, ಅಣ್ಣಾಸಾಹೇಬ ಇಂಗಳೆ, ರಾಮಚಂದ್ರ ನಿಶಾನದಾರ, ಸುರೇಶ ಪಾಟೀಲ, ತುಕಾರಾಮ ಪಾಟೀಲ, ಪಿಂಟು ಹಿರೇಕುರಬರ, ಸಿದ್ದಗೌಡ ಮಗದುಮ ಅಪ್ಪಾಸಾಹೇಬ ಪೋಳ, ಶಿವಶಕ್ತಿ ಕಾರ್ಖಾನೆ ಮುಖ್ಯಸ್ಥ ಬಿ.ಎ.ಪಾಟೀಲ, ಎನ್.ಎಸ್.ಮುಲ್ಲಾ, ಮುರಳಿ ರಾಜಾನುಗಮ, ಪಾಂಡು ಬಡಗನವರ, ಕೇಶವ ಪ್ರಸಾದ, ಸಂಜಯ ಯಾದವ, ಬಿ.ಎಸ್.ಮುಧೋಳ, ವಿಜಯ ಪಾಟೀಲ, ಸತೀಶ ಪಾಟೀಲ, ಅಮಿತ ಕೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net