ವಿಜಯವಾಣಿ ಸುದ್ದಿಜಾಲ ಕೋಲಾರ
ಸಮಗ್ರ ಕರ್ನಾಟಕ ಕನ್ನಡಿಗರ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಸರ್ಕಾರದ ಹಿಂದೆ ಬಿದ್ದಿದ್ದರೂ ಗಮನ ಹರಿಸದ ಕಾರಣ ಏ.೨೬ ರಂದು ರಾಜ್ಯದ ವಾಟಳ್ ಪಕ್ಷದಿಂದ ವಿನೂತವಾಗಿ ರಾಜ್ಯಾದಾದ್ಯಂತ ಸ್ವಾಭಿಮಾನಿ ಕನ್ನಡಿಗರಿಂದ ಈಡಿಗಾಯಿ (ತೆಂಗಿನ ಕಾಯಿ) ಒಡೆಯುವ ಚಳುವಳಿಯನ್ನು ಹಮ್ಮಿ ಕೊಳ್ಳಾಗುವುದು ಎಂದು ಮಾಜಿ ಶಾಸಕ ವಾಟಳ್ ನಾಗರಾಜ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಶಾಸನದ ಸಭೆಗಳಲ್ಲಿ ಕನ್ನಡಿಗರ ಜ್ವಲಂತ ಸಮಸ್ಯೆಗಳಿದ್ದರೂ ಬಗೆಹರಿಸಲು ಧ್ವನಿ ಎತ್ತಬೇಕೆಂಬ ಪ್ರಮಾಣಿಕ ಚಿಂತನೆಯೇ ಇಲ್ಲವಾಗಿದೆ. ಲೋಕಸಭೆಯಲ್ಲಿ ನಮ್ಮವರೂ ಯಾರೂ ಸಹ ನೀರಾವರಿ, ಹೆದ್ದಾರಿ, ರಾಜ್ಯದ ಅನುದಾನ ಸೇರಿದಂತೆ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದರೂ ಸಹ ಪರಿಣಾಮಕಾರಿಯಾಗಿ ಮಾತನಾಡುವವರೂ ಇಲ್ಲವಾಗಿದೆ ಎಂದು ಬೇಸರ ವ್ಯಕ್ತ ಪಡೆಸಿದರು.
ರಾಜ್ಯದ ಗಡಿ ಭಾಗವಾದ ಬೆಳಗಾವಿಯಲ್ಲಿ ಮಹಾರಾಷ್ಟçದ ಏಕೀಕರಣ ಸಂಸ್ಥೆಯು ಪಾಳೆಗಾರಿಕೆ ನಡೆಸುತ್ತಿದ್ದು, ಇದಕ್ಕೆ ಮಹಾರಾಷ್ಟç ಸರ್ಕಾರದ ಬೆಂಬಲವಿದೆ. ಕನ್ನಡದಪರ ಸಂಘಟನೆಗಳನ್ನು ಶೋಷಿಸುತ್ತಿದೆ. ದೌರ್ಜನ್ಯ ನಡೆಸುತ್ತಿದ್ದರೂ ಸೂಕ್ತ ಕ್ರಮಗಳಿಲ್ಲ. ರಕ್ಷಣೆ ಇಲ್ಲವಾಗಿದೆ. ನೀರಾವರಿ ಯೋಜನೆಗಳಾದ ಮಹಾದಾಯಿ, ಕಳಸ ಬಂಡೂರಿ, ಮೇಕೆ ದಾಟು ಮುಂತಾದ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಎಂ.ಇ.ಎಸ್ ವಿರೋಧ ವ್ಯಕ್ತ ಪಡೆಸುತ್ತಿದೆ. ಪರಭಾಷಿಕರ ದಬ್ಬಾಳಿಕೆಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅರೋಪಿಸಿದರು.
ರಾಜ್ಯದಲ್ಲಿ ಹೊರಗಿನವರದೇ ಹಾದಿ ಬೀದಿಯಲ್ಲಿ ವ್ಯಾಪಕವಾದ ವಹಿವಾಟುಗಳು ಆಗಿವೆ. ಇನ್ನು ನಮ್ಮವರು ಉದ್ದಾರವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕರಾವಳಿ ಪ್ರದೇಶಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿಯಾಗಿಲ್ಲ. ಕಾಸರಗೊಡು ಮಹಾದಾಯಿ ವರದಿಯಂತೆ ಕರ್ನಾಟಕಕ್ಕೆ ಸೇರ್ಪಡೆ ಮಾಡಿಲ್ಲ. ತಾಳವಾಡಿ ಚಾಮರಾಜ ಜಿಲ್ಲೆಗೆ ಸೇರಬೇಕು ಹಾಗೂ ಹೊಸೂರನ್ನು ತಮಿಳು ನಾಡು ಅಕ್ರಮಿಸಿದೆ. ಈಗ ವಿಮಾನಗಳ ಫ್ಯಾಕ್ಟರಿಯನ್ನು ಹೊಸೂರಿನಲ್ಲಿ ಪ್ರಾರಂಭಿಸಲಾಗುತ್ತಿದೆ. ಸುಮಾರು ೨ ಕೋಟಿ ಕನ್ನಡಿಗರು ಹೊರ ಜಿಲ್ಲೆಗಳಲ್ಲಿದ್ದಾರೆ. ಅವರ ಮಾತೃಭಾಷೆ ಕನ್ನಡವಾದರೂ ಹೊರಗೆ ಪ್ರಾದೇಶಿಕ ಭಾಷೆ ಮಾತನಾಡುತ್ತಿದ್ದಾರೆ. ಕರ್ನಾಟಕದ ಗಡಿ ಪ್ರದೇಶಗಳನ್ನು ನೆರೆ ರಾಜ್ಯಗಳಾದ ಮಹಾರಾಷ್ಟç, ಕೇರಳ, ತಮಿಳು ನಾಡು ಅತಿಕ್ರಮಿಸಿರುವುದು ಕನ್ನಡಿಗರಿಗೆ ಚಿಂತಾಜನಕ ಪ್ರಶ್ನೆಯಾಗಿ ಕಾಡಿದೆ ಎಂದು ವಿಷಾಧಿಸಿದರು.
ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯಪಾಲರು ಪರಭಾಷೆಗಳಲ್ಲಿ ಭಾಷಣ ಮಾಡುತ್ತಿದ್ದರೂ ನಮ್ಮ ಶಾಸಕರು ಯಾರೂ ಪ್ರಶ್ನಿಸುತ್ತಿಲ್ಲ. ನಾನು ೧೫ ವರ್ಷಗಳ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ರಾಜ್ಯಪಾಲರು ಪರಭಾಷೆಯಲ್ಲಿ ಮಾಡಿದ ಭಾಷಣಕ್ಕೆ ಕನ್ನಡದಲ್ಲೇ ಮಾತನಾಡಲು ಒತ್ತಾಯಿಸಿದ್ದೆ ಎಂಬುವುದನ್ನು ನೆನಪಿಸಿ ಕೊಂಡ ಅವರು ಇಂಡೇಲಾ ಕಾರ್ಖಾನೆ ಸ್ಥಾಪನೆಗೆ ಸಾವಿರಾರು ಎಕರೆ ರಾಜ್ಯ ಸರ್ಕಾರ ನೀಡುತ್ತಿದೆ. ಅದರೆ ಹೊರಗಿನ ಕೈಗಾರಿಕೆಗಳು ರಾಜ್ಯದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡರೂ ಕನ್ನಡಿಗೆ ಕೆಲಸವನ್ನು ನೀಡುವಲ್ಲಿ ಮೀನಾ ಮೇಷ ಎಣಿಸುತ್ತಿರುವುದು ಖಂಡನೀಯ ಎಂದರು.
ರಾಜಧಾನಿಯನ್ನು ಐ.ಟಿ. ಬಿ.ಟಿ. ಕಂಪನಿಗಳು ಅತಿಕ್ರಮಿಸಿ ಕೊಂಡಿದ್ದು, ಅವರನ್ನು ನಾವುಗಳು ಯಾರೂ ಪ್ರಶ್ನಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ದ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಮಾಡಿದಂತ ರಾಜ್ಯ ಬಂದ್ ಯಶಸ್ವಿಯಾಗಿದೆ. ರಾಜ್ಯದಲ್ಲಿ ಹಿಂದಿ ಚಿತ್ರ ಸೇರಿದಂತೆ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರನ್ನು ವಿಭಜಿಸಿ ಪರಭಾಷಿಕರನ್ನು ಮೇಯರ್‌ಗಳನ್ನಾಗಿ ಮಾಡುವ ಹುನ್ನಾರಗಳು ತೆರೆಯ ಹಿಂದೆ ನಡೆಯುತ್ತಿದೆ. ಬೆಂಗಳೂರನ್ನು ನಾಡ ಪ್ರಭು ಕೆಂಪೇಗೌಡರು ಕಟ್ಟಿರುವುದನ್ನು ವಿಭಜಿಸಲು ಅವಕಾಶ ನೀಡಬಾರದು. ಕೆರೆ, ಕಟ್ಟೆಗಳನ್ನು ನುಂಗಿ ನೀರು ಕುಡಿದು ಈಗ ಬೆಂಗಳೂರು ನಾಳೆ ಕರ್ನಾಟಕವನ್ನೇ ವಿಭಜಿಸಲು ಮುಂದಾದರೂ ಹೆಚ್ಚೇನಲ್ಲ ಎಂದು ಟೀಕಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನ ವಿರೋಧ ಧೋರಣೆ ವಿರುದ್ದ ಮತ್ತೊಂದು ಚಳುವಳಿ ಮೂಲಕ ಗಮನ ಸೆಳೆಯುವುದು ಅನಿವಾರ್ಯವಾಗಿರುವ ಕಾರಣ ಏ.೨೬ ರಂದು ಸುಮಾರು ೨ ಕೋಟಿ ಹಿಡಿಗಾಯಿ ಒಡೆಯುವ ಚಳುವಳಿಯನ್ನು ಮಾಡಲಾಗುತ್ತಿದೆ. ಸಾಮಾನ್ಯವಾಗಿ ಹರಕೆಗಳಿಗೆ ಈಡೇರಿಕಾಗಿ, ಈಡೇರಿದ್ದಕ್ಕಾಗಿ ಹಿಡಿಗಾಯಿ ಹೊಡೆಯುವ ಪದ್ದತಿಯನ್ನು ನೋಡಿದ್ದೇವೆ. ಈಗ ನಾವು ಜನತೆಯ ಬೇಡಿಕೆಗಳ ಈಡೇರಿಕೆಗಾಗಿ ಹಿಡಿಗಾಯಿ ಹೊಡೆಯುವ ವಿನೂತನ ಚಳುವಳಿ ಇದಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡ ಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಭವನದ ಹೊರಗೆ ಹಿಡಿಗಾಯಿಗಳನ್ನು ಹೊಡೆಯುವ ಮೂಲಕ ಏ.೨೬ರಂದು ಹಿಡಿಗಾಯಿ ಚಳುವಳಿಗೆ ಚಾಲನೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಪರ ಸಂಘಟನೆಗಳ ಹಿರಿಯ ಮುಖಂಡ ಅ.ಕೃ. ಸೋಮಶೇಖರ್, ಕನ್ನಡ ರಕ್ಷಣೆ ವೇದಿಕೆಯ ರಾಜ್ಯ ಸಂಚಾಲಕ ಜಯದೇವ ಪ್ರಸನ್ನ, ಕನ್ನಡದ ವೆಂಕಟಪ್ಪ, ನೀರಾವರಿ ಹೋರಾಟಗಾರ ಪುಟ್ಟಣ್ಣ, ಪಾರ್ಥ ಹಾಗೂ ಮುಬಾರಕ್ ಉಪಸ್ಥಿತರಿದ್ದರು.
ಚಿತ್ರ ೧೧ ಕೆ.ಎಲ್.ಆರ್. ೦೬ : ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಆಗ್ರಯಿಸಿ ವಾಟಳ್ ನಾಗರಾಜ್ ನೇತೃತ್ವದಲ್ಲಿ ರಾಜ್ಯದಾದ್ಯಂತ ಏ.೨೬ ಹಿಡಿಗಾಯಿ ಚಳುವಳಿ ಅಂಗವಾಗಿ ಕೋಲಾರದ ಪತ್ರಕರ್ತರ ಭವನದ ಮುಂಭಾಗ ಹಿಡಿಗಾಯಿ ಒಡೆಯುವ ಮೂಲಕ ಚಳುವಳಿಗೆ ಚಾಲನೆ ನೀಡಿದರು.