

ಲಿಂಗದಹಳ್ಳಿ: ಬೆಂಗಳೂರಿನಲ್ಲಿರುವ ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂದು ಸಮಾಜ ಸೇವಕ ಗುಳ್ಳದಮನೆ ಗೋಪಾಲಕೃಷ್ಣ ಹೇಳಿದರು.
ಲಿಂಗದಹಳ್ಳಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಲಿಂಗದಹಳ್ಳಿ ಹೋಬಳಿ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ನೆಲ, ಜಲ, ಇತರ ಸೌಲಭ್ಯಗಳನ್ನು ಬಳಸಿಕೊಳ್ಳುವ ಕಂಪನಿಗಳು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವುದು ಅವರ ಕರ್ತವ್ಯ ಎಂದರು.
ತಾಲೂಕು ಕಸಾಪ ಘಟಕದ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ನೂತನ ಅಧ್ಯಕ್ಷರು ಗ್ರಾಮ ಪಂಚಾಯಿತಿಗೆ ಒಂದರಂತೆ ಘಟಕಗಳನ್ನು ಸ್ಥಾಪಿಸುವ ಮೂಲಕ ಪ್ರತಿ ಗ್ರಾಮಗಳಲ್ಲಿಯೂ ಕನ್ನಡದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಇಮ್ರಾನ್ ಅಹಮ್ಮದ್ ಬೇಗ್, ಜೆ.ಎಂ.ಸೋಮಶೇಖರಪ್ಪ, ಬಿ.ಆರ್.ರವಿ, ತ.ಮ.ದೇವಾನಂದ, ಎಂ.ಬಿ.ರಾಮಚಂದ್ರಪ್ಪ, ಟಿ.ಎನ್.ಜಗದೀಶ್, ಎಲ್.ಭರತ್, ಎನ್.ಜಿ.ರಮೇಶ್, ಕೆ.ವಿ.ದರ್ಶನ್, ಕರ್ನಲ್ ಚಂದ್ರಯ್ಯ, ಜೆ.ಕುಮಾರಸ್ವಾಮಿ ಇತರರಿದ್ದರು.
ಹೋಬಳಿ ಕಸಾಪ ನೂತನ ಅಧ್ಯಕ್ಷರಾಗಿ ಆರ್.ತಮ್ಮಯ್ಯ, ಎಂ.ಕೆ.ಚಂದ್ರಪ್ಪ (ಗೌರವಾಧ್ಯಕ್ಷ), ಎಲ್.ಎಸ್.ನಾಗೇಶಪ್ಪ (ಪ್ರಧಾನ ಕಾರ್ಯದರ್ಶಿ), ಬಿ.ಸಿ.ಚಂದ್ರಶೇಖರ್ (ಗೌರವ ಕಾರ್ಯದರ್ಶಿ), ಜಿ.ಯು.ಕಿರಣ್ (ಕೋಶಾಧ್ಯಕ್ಷ), ಕೆ.ಓಂಕಾರಪ್ಪ (ಸಂಘಟನಾ ಕಾರ್ಯದರ್ಶಿ) ಮತ್ತು 30 ಮಂದಿ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.