ಕದಾಳು ಗ್ರಾಪಂನಲ್ಲಿ ಧ್ವಜಾರೋಹಣ

oplus_4194304
Published on

ಆಲೂರು : ತಾಲೂಕಿನ ಕುಂದೂರು ಹೋಬಳಿ ಕದಾಳು ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕದಾಳು ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ ಧ್ವಜಾರೋಹಣವನ್ನು ನೆರವೇರಿಸಿದರು. ಪಿಡಿಒ ಶಿವಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಲ್ವರು ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಕದಾಳು ಗ್ರಾಪಂ ವ್ಯಾಪ್ತಿಯಲ್ಲಿ ವೈದ್ಯಕೀಯ ಉಚಿತ ಸೀಟು ಪಡೆದ ವಿದ್ಯಾರ್ಥಿ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕದಾಳು ಪ್ರೌಢಶಾಲೆಯ ವಿದ್ಯಾರ್ಥಿನಿ ಪೂಜಾಗೆ ಶಿಕ್ಷಕರು ನಗದು ಬಹುಮಾನ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದರು. ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹತ್ತಾರು ಹಳ್ಳಿಗಳಿಂದ ಸೇರಿದ್ದ ಸ್ವಾತಂತ್ರೊೃೀತ್ಸವ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿದವು. ಕದಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೇತಾ, ಕಾರ್ಯದರ್ಶಿ ದಿಲೀಪ್, ಸದಸ್ಯರಾದ ದೇವರಾಜು, ಸೋಮಶೇಖರ್, ಪುಟ್ಟರಾಜು, ನೀಲಮ್ಮ, ಶಿವಕುಮಾರ್, ಸುಧಾ, ನಾಗರಾಜು, ಮಾಜಿ ಅಧ್ಯಕ್ಷ ಶಾಂತಪ್ಪ, ಜೆಡಿಎಸ್ ಮುಖಂಡರಾದ ರಾಜಪ್ಪಗೌಡ, ರಾಮಚಂದ್ರ, ಕೆ.ಆರ್.ಪ್ರವೀಣ್, ರುದ್ರೇಗೌಡ, ದಿನೇಶ್, ಜಯಣ್ಣ ಮುತ್ತಿಗೆ, ಮಹೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net