ಕತ್ತು ಹಿಸುಕಿ ಯುವತಿಯ ಕೊಲೆ ಮಾಡಿ ಬಿಸಾಕಿರುವ ಬಗ್ಗೆ ಶಂಕೆ

death latha
Published on

ನಗರದ ಹೊರವಲಯದಲ್ಲಿ ಬುಧವಾರ ಯುವತಿ ಶವ ಪತ್ತೆಯಾಗಿದ್ದು, ಕತ್ತು ಹಿಸುಕಿ ಯುವತಿಯ ಕೊಲೆ ಬಿಸಾಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಗಿರಿಯಾಬೋವಿ ಪಾಳ್ಯ ನಿವಾಸಿ ಲಕ್ಷ್ಮಣ್ ಪುತ್ರಿ ಲತಾ (25) ಶವವಾಗಿ ಪತ್ತೆಯಾಗಿರುವ ಯುವತಿ. ಆಕೆಯ ಮೃತ ದೇಹ ನಗರದ ಹೊರವಲಯದ ವಿದ್ಯಾವಿಕಾಸ ಕಾಲೇಜಿನ ಬಳಿ ಪತ್ತೆಯಾಗಿದೆ.

ಬುಧವಾರ ಬೆಳಗ್ಗೆ ಕಾಲೇಜಿನ ಬಳಿ ಶವ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ವೇಳೆ ಮೊಬೈಲ್ ಸಿಕ್ಕಿದೆ.

ನಗರದ ಮಕ್ಕಳ ದತ್ತು ಕೇಂದ್ರದಲ್ಲಿ ಸಂಚಾಲಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಲತಾ, ಮಂಗಳವಾರ ಸಂಜೆ ಕೆ.ಆರ್. ಆಸ್ಪತ್ರೆಯ ಬಳಿ ತನ್ನ ತಂದೆಗೆ ಮೊಬೈಲ್‌ನಿಂದ ಕರೆ ಮಾಡಿದ್ದಾರೆ. ಮಳೆ ಹೆಚ್ಚಾಗಿರುವ ಕಾರಣ ನನ್ನನ್ನು ಕೇಂದ್ರಕ್ಕೆ ಬಿಡುವಂತೆ ಕೇಳಿದ್ದಾರೆ. ಶಿವರಾಂಪೇಟೆಯಲ್ಲಿದ್ದ ಲಕ್ಷ್ಮಣ್, ಆಟೋ ಮಾಡಿಕೊಂಡು ಹೋಗುವಂತೆ ಹೇಳಿದ್ದಾರೆ. ನಂತರ ರಾತ್ರಿ ನಾಲ್ಕಾರು ಬಾರಿ ಕರೆ ಮಾಡಿದರೂ ಆಕೆ ಕರೆ ಸ್ವೀಕರಿಸಿಲ್ಲ. ಬುಧವಾರ ಬೆಳಗ್ಗೆ 7 ಗಂಟೆ ವೇಳೆಗೆ ಅವರು ಮಗಳ ಮೊಬೈಲ್‌ಗೆ ಕರೆ ಮಾಡಿದ ವೇಳೆ ಆಲನಹಳ್ಳಿ ಪೊಲೀಸರು ಕರೆ ಸ್ವೀಕರಿಸಿ ನಡೆದ ವಿಚಾರವನ್ನು ತಳಿಸಿ ಸ್ಥಳಕ್ಕೆ ಬರಲು ಹೇಳಿದ್ದಾರೆ. ಸ್ಥಳ ಮಹಜರು ನಡೆಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ಲತಾಳ ಕೊಲೆ ಪ್ರಕರಣ ಸಂಬಂಧ ಆರೋಪಿ ಪತ್ತೆಗೆ ತಂಡ ರಚಿಸಲಾಗಿದೆ. ಉಸಿರುಗಟ್ಟಿಸಿ ಅಥವಾ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲ್ಲಲಾಗಿದೆಯೇ? ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ’ ಎಂದು ಮುತ್ತುರಾಜು ತಿಳಿಸಿದ್ದಾರೆ. ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net