ಕಡ್ಡಾಯವಾಗಿ ಮತ ಚಲಾಯಿಸಿ ಜವಾಬ್ದಾರಿ ನಿರ್ವಹಿಸಿ

ಹುಣಸೂರು ನಗರಸಭೆ ವತಿಯಿಂದ ಮತದಾನದ ಅರಿವು ಕುರಿತಾದ ಜಾಗೃತಿ ಜಾಥಕ್ಕೆ ಪೌರಾಯುಕ್ತ ಸುಜಯ್ ಶುಕ್ರವಾರ ಚಾಲನೆ ನೀಡಿದರು. ಪರಿಸರ ಇಂಜಿನಿಯರ್ ಎಲ್. ರೂಪಾ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್ ಇತರರಿದ್ದರು.
HUN-MAR-31-1(CMC ELECTION JATHA) ,
Published on

ಹುಣಸೂರು: ಹುಣಸೂರು ನಗರಸಭೆ ವತಿಯಿಂದ ಮತದಾನದ ಮಹತ್ವದ ಕುರಿತಾಗಿ ಜಾಗೃತಿ ಜಾಥಾ ನಡೆಸಲಾಯಿತು.


ಶುಕ್ರವಾರ ನಗರಸಭೆ ಕಚೇರಿ ಮುಂಭಾಗ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪೌರಾಯುಕ್ತ ಸುಜಯ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೆನ್ನುವುದು ಸಾರ್ವಜನಿಕರ ಜವಾಬ್ದಾರಿಯುತ ಕರ್ತವ್ಯವಾಗಿದೆ. ಯಶಸ್ವಿ ಮತದಾನದಿಂದ ಮಾತ್ರ ಪ್ರಜಾತಂತ್ರ ಯಶಸ್ವಿಯಾಗಲು ಸಾಧ್ಯ. ಮತದಾನ ಪ್ರಮಾಣದಲ್ಲಿ ಪ್ರತಿ ಚುನಾವಣೆಯಲ್ಲೂ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಅದರಲ್ಲೂ ನಗರವ್ಯಾಪ್ತಿಯ ಅಕ್ಷರಸ್ಥರು ಮತಗಟ್ಟೆ ಬಳಿಗೆ ಬರಲು ಹಿಂಜರಿಯುತ್ತಿರುವುದು ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ನಗರದಾದ್ಯಂತ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ನಡೆಸಲಾಗುತ್ತಿದೆ. ನಾಗರಿಕರು ಮತದಾನದ ದಿನ ಕಡ್ಡಾಯವಾಗಿ ಮತಚಲಾಯಿಸುವ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸಬೇಕೆಂದು ಕೋರಿದರು.
ಪರಿಸರ ಇಂಜಿನಿಯರ್ ಎಲ್. ರೂಪಾ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net