ಕಡೆಮನುಗನಹಳ್ಳಿ ಗ್ರಾಪಂಗೆ ಕಾಳೇಗೌಡ ಅಧ್ಯಕ್ಷ

IMG-20230808-WA0143
ಹನಗೋಡು ಹೋಬಳಿಯ ಕಡೆಮನುಗನಹಳ್ಳಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷ ಕಾಳೇಗೌಡ ಹಾಗೂ ಉಪಾಧ್ಯಕ್ಷೆ ರುದ್ರಬಾಯಿ ಅವರನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಸನ್ಮಾನಿಸಿದರು. ಕಿರಂಗೂರು ಬಸವರಾಜ್, ತಟ್ಟೆಕೆರೆ ಶ್ರೀನಿವಾಸ್, ಗವಿಮಾದು ಇತರರು ಇದ್ದರು.
Published on

ಹನಗೋಡು: ಹೋಬಳಿಯ ಕಡೆಮನುಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕಾಳೇಗೌಡ ಹಾಗೂ ಉಪಾಧ್ಯಕ್ಷರಾಗಿ ರುದ್ರಬಾಯಿ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಕಾಳೇಗೌಡ ಹಾಗೂ ರುದ್ರಬಾಯಿ ಮಾತ್ರ ಉಮೇದುವಾರಿಕೆ ಸಲ್ಲಿಸಿದರು. ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ಬಿಇಒ ರೇವಣ್ಣ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಸನ್ಮಾನಿಸಿದರು. ಗ್ರಾಮ ಪಂಚಾಯತಿ ಸದಸ್ಯರಾದ ಗೌರಮ್ಮ, ಪಾರ್ವತಮ್ಮ, ರಾಧಾ, ಚಂದ್ರೇಗೌಡ, ಸುನಂದಾ, ಸದಾ, ಮಂಜುಳಾ, ಲಲಿತಾ, ನಾಗಣ್ಣ, ವೆಂಕಟೇಶ್, ಅರಸಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜ್, ಮುಖಂಡರಾದ ಪುಟ್ಟ ಮಲ್ಲೇಗೌಡ, ಗವಿಮಾದು, ರವಿಗೌಡ, ಸ್ವಾಮಿಗೌಡ, ಹರೀಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net