

ಮೈಸೂರು : ಕಟ್ಟಡ ಕಾರ್ಮಿಕರ ನೆರವಿಗೆ ಸರ್ಕಾರ ಶೀಘ್ರ ಮುಂದಾಗಲಿ ಎಂದು ಸೋಮೇಶ್ವರ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪೇಂಟ್ ನಾಗರಾಜ್ ಆಗ್ರಹಿಸಿದರು.
ಕಟ್ಟಡ ಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿಂದಿನ ಸರ್ಕಾರ ಕಾರ್ಮಿಕರಿಗೆ ನೀಡಿದ್ದ ಟೂಲ್ ಕಿಟ್, ಬಸ್ ಪಾಸ್ ಕಿತ್ತುಕೊಳ್ಳುವ ಕೆಲಸ ಮಾಡಬೇಡಿ ಎಂದು ಸೋಮವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.
ಕೂಲಿ ಕಾರ್ಮಿಕರ ಕುಟುಂಬ ನಿರ್ವಹಣೆ ತುಂಬಾ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಬರಬೇಕು. ಸರ್ಕಾರ ಈಗ ಏಕಾಏಕಿ ಬಸ್ ಪಾಸ್ ತಡೆ ಹಿಡಿಯುವುದು ಸರಿಯಲ್ಲ. ಕಾರ್ಮಿಕರ ಕೂಲಿ ಹಣದಲ್ಲಿ ಕನಿಷ್ಠ ಹಣ ಉಳಿತಾಯವಾಗುತ್ತಿತ್ತು, ಈಗ ಅದಕ್ಕೂ ಕಲ್ಲು ಬಿದ್ದಂತಾಗಿದೆ ಎಂದು ದೂರಿದರು.
ನಿವೇಶನ ಖರೀದಿ ಮಾಡಲು ಕಾರ್ಮಿಕರ ಬಳಿ ಹಣವಿಲ್ಲದೆ ಕಾರ್ಮಿಕ ಇಲಾಖೆಯ ಸಹಾಯಧನಕ್ಕಾಗಿ ಕಾಯುತ್ತಿದ್ದಾರೆ. ಕಾರ್ಮಿಕರು ಹೊಸದಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದನ್ನು ರದ್ದುಪಡಿಸಬೇಕು. ಹಿಂದಿನ ಸರ್ಕಾರ ಜಾರಿಗೊಳಿಸಿರುವ ಯೋಜನೆಯನ್ನು ಮುಂದುವರಿಸಬೇಕು. ಕಾರ್ಮಿಕರ ಹಿತ ಕಾಪಾಡಲು ಮುಂದಾಗಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.