ಒತ್ತುವರಿ ಕಾರ್ಯಾಚರಣೆ ನೆಪದಲ್ಲಿ ರೈತರ ಮೇಲೆ ದಬ್ಬಾಳಿಕೆ ಬೇಡ/ ರೈತರ ಮೇಲಿನ ಕೇಸುಗಳನ್ನು ವಾಪಸ್ಸು ಪಡೆಯಬೇಕು/ ಶಾಸ ಜಿ.ಕೆ.ವೆಂಕಟಶಿವಾರೆಡ್ಡಿ

Published on

ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ

ಕಳೆದ ೨೦ ದಿನಗಳಿಂದ ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡು ಭರದಿಂದ ಕಾರ್ಯಾಚರಣೆ ಮಾಡುತ್ತಿರುವುದನ್ನು ಕಾನೂನಿಗೆ ಗೌರವ ಕೊಟ್ಟು ಸ್ವಾಗತಿಸುತ್ತೇನೆ. ಆದರೆ ರೈತರ ಬೆಳೆಗಳು ತೆಗೆದುಕೊಳ್ಳುವವರೆಗೂ ಕಾಲಾವಕಾಶ ಕೊಟ್ಟು ನಂತರ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿಕೊಳ್ಳಿ ಎಂದು ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿಯವರು ಮನವಿ ಮಾಡಿದ್ದಾರೆ.

ಅವರು ಪತ್ರಿಕಾ ಹೇಳಿಕೆ ಮೂಲ ಅರಣ್ಯ ಇಲಾಖೆಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದು, ಅರಣ್ಯ ಇಲಾಖೆಯ ಕಾರ್ಯಾಚರಣೆಯ ಸಂದರ್ಭದಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಒತ್ತುವರಿ ಭೂಮಿಯಲ್ಲಿ ರೈತರು ಬೆಳೆದಿರುವ ತರಕಾರಿ ಬೆಳೆಗಳನ್ನು ಹಾಗೂ ಮಾವಿನ ಮರಗಳನ್ನು ನಾಶ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ದಯವಿಟ್ಟು ಒತ್ತುವರಿ ಭೂಮಿಯಲ್ಲಿ ರೈತರ ತರಕಾರಿ ಬೆಳೆಗಳು ತೆಗೆದುಕೊಳ್ಳುವ ವರೆವಿಗೂ ಹಾಗು ಕೋಳಿ ಫಾರಂ ನಂತಹ ಯಾವುದೇ ಕಟ್ಟಡಗಳು ನಿರ್ಮಿಸಿದ್ದಲ್ಲಿ ಅವುಗಳನ್ನು ತೆಗೆದುಕೊಳ್ಳುವವರೆವಿಗೂ ಮಾನವೀಯ ದೃಷ್ಟಿಯಿಂದ ಕಾಲಾವಕಾಶ ಕೊಟ್ಟು ನಂತರ ತಮ್ಮ ಜಾಗವನ್ನು ತಾವು ತೆರವು ಮಾಡಿಕೊಳ್ಳಬೇಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ದೇಶದ ಸಂವಿಧಾನ ಮತ್ತು ಕಾನೂನಿಗಿಂತ ನಾವ್ಯಾರು ದೊಡ್ಡವರಲ್ಲ, ಸರ್ಕಾರ ಮತ್ತು ಕೋರ್ಟ್ ಆದೇಶಗಳನ್ನು ಪಾಲಿಸಬೇಕಾಗಿದೆ. ನಾವು ಅರಣ್ಯ ಇಲಾಖೆಯವರ ಮೇಲೆ ಯಾವುದೇ ರೀತಿಯ ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ರೈತರು ಮಾಡಬಾರದು. ಒತ್ತುವರಿ ತೆರವು ಸಂದರ್ಭದಲ್ಲಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿರಬಹುದು ಅದಕ್ಕೆ ಪೊಲೀಸ್ ಇಲಾಖೆ ರೈತರನ್ನು ಸಮಾಧಾನ ಪಡಿಸಿ ಅವರ ಮೇಲೆ ಯಾವುದೇ ದೂರು ದಾಖಲಿಸದಂತೆ ಕ್ರಮ ವಹಿಸಬೇಕು ಹಾಗು ಇತ್ತೀಚೆಗೆ ಕೆಲವು ರೈತರ ವಿರುದ್ದ ದೂರು ದಾಖಲು ಮಾಡಿಕೊಂಡಿರುವುದು ನನ್ನ ಗಮನಕ್ಕೆ ಬಂದಿದ್ದು, ರೈತರ ಮೇಲಿನ ದೂರುಗಳನ್ನು ಹಿಂಪಡೆಯಬೇಕು ಎಂದು ಪೊಲೀಸ್ ಇಲಾಖೆಯಲ್ಲಿಯೂ ವಿನಂತಿಸಿದ್ದಾರೆ.

ರೈತರು ಸಹ ಆತ್ಮಹತ್ಯೆಯಂತಹ ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು, ನಾವೆಲ್ಲಾ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದು, ಕಾನೂನಿಗೆ ಗೌರವ ಕೊಟ್ಟು ಸರ್ಕಾರ ಮತ್ತು ಕೋರ್ಟ್ ಆದೇಶಗಳನ್ನು ಪಾಲನೆ ಮಾಡೋಣ ಎಂದರು.

ಚಿತ್ರ ೧೦. ಕೆ.ಎಲ್.ಆರ್. ೦೪ : ಶಾಸಕ ಜೆ.ಕೆ.ವೆಂಕಟಶಿವಾರೆಡ್ಡಿ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net