

ತಾಲೂಕಿನ ಮಾಣಿಕ್ಯಪುರದ ಗ್ರಾಮದ ತೆಂಗಿನ ತೋಟದಲ್ಲಿನ ಗೋದಾಮಿನಲ್ಲಿ ದಾಸ್ತಾನಿರಿಸಿದ್ದ ಒಂದು ಸಾವಿರ ತೆಂಗಿನ ಕಾಯಿಗಳನ್ನು ಕಳವು ಮಾಡಲಾಗಿದೆ.
ಗ್ರಾಮದ ಪ್ರಕಾಶ್ ಅವರ ತೋಟದಲ್ಲಿನ ಕಾಯಿಗಳನ್ನು ಸಂಗ್ರಹಿಸಿ ಗೋದಾಮಿನಲ್ಲಿ ಇರಿಸಿದ್ದರು. ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಖದೀಮರು, ಗೋದಾಮಿನ ಬೀಗ ಮುರಿದು ಲಕ್ಷಾಂತರ ರೂ. ವೌಲ್ಯದ ಒಂದು ಸಾವಿರ ತೆಂಗಿನ ಕಾಯಿಯನ್ನು ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ತೋಟದ ಮಾಲೀಕ ದೂರು ನೀಡಿದ್ದು, ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.