

ವರಮಹಾಲಕ್ಷ್ಮೀ ಹಬ್ಬಕ್ಕೆಂದು ತವರಿಗೆ ತೆಗೆದುಕೊಂಡು ಹೋಗುತ್ತಿದ್ದ ಸುಮಾರು ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ನಗರದ ಸಬರ್ಬನ್ ಬಸ್ ನಿಲ್ದಾಣದಲ್ಲಿ ಖದೀಮರು ಕಳ್ಳತನ ಮಾಡಿರುವುದಾಗಿ ಮಹಿಳೆಯೊಬ್ಬರು ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಗ್ರಹಾರ ನಿವಾಸಿ ಎಸ್.ಜಿ.ವೀಣಾ ದೂರು ನೀಡಿದ್ದು, ಆ.7ರಂದು ಸಂಜೆ ಸಾಲಿಗ್ರಾಮದಲ್ಲಿರುವ ತವರು ಮನೆಗೆ ಹೋಗುವಾಗ ವರಮಹಾಲಕ್ಷ್ಮೀ ಹಬ್ಬದಂದು ಪೂಜಿಸಲೆಂದು ನನ್ನ ಸುಮಾರು 90 ಗ್ರಾಂ ಚಿನ್ನದ ಒಡವೆಗಳನ್ನು ಬಾಕ್ಸ್‌ನಲ್ಲಿ ಹಾಕಿಕೊಂಡು, ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ಸಬರ್ಬನ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ತುಂಬಾ ರಶ್ ಇತ್ತು. ಬಸ್ ಹತ್ತಿ ವ್ಯಾನಿಟಿ ಬ್ಯಾಗ್ ನೋಡಿದಾಗ ಅದರ ಜಿಪ್ ಕಿತ್ತುಹೋಗಿತ್ತು. ಅದರೊಳಗಿಟ್ಟಿದ್ದ ಚಿನ್ನಾಭರಣದ ಬಾಕ್ಸ್ ಕಳ್ಳತನವಾಗಿತ್ತು ಎಂದು ತಿಳಿಸಿದ್ದಾರೆ.