

ಎಸ್.ಬಿ.ಎಂ. ಮತ್ತು ಇತರ ಬ್ಯಾಂಕ್ ನೌಕರರ ಕ್ಷೇಮಾಭಿವೃದ್ಧಿ ಬಡಾವಣೆಯಲ್ಲಿ ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಭಾನುವಾರ ‘ಚಾರು ಮಂಜೂಷಾ -1’ ಕಾರ್ಯಕ್ರಮ ನೆರವೇರಿತು.
ಲೇಖಕರು, ಆಪ್ತ ಸಮಾಲೋಚಕರೂ ಆದ ಡಾ.ಶಾಂತಾ ನಾಗರಾಜು ಅವರು ಅಭ್ಯಾಗತರಾಗಿ ಆಗಮಿಸಿದ್ದರು. ಇದೇ ವೇಳೆ ಅವರ ‘ಏಕಾಂಗಿ ಕವಯಿತ್ರಿಯ ಪ್ರವಾಸದ ಡೈರಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಉದ್ಯಮಿ ಶ್ರೀವಿದ್ಯಾ ಕಾಮತ್ ಅವರು ‘ದೀಪಧಾರಿಣಿ’ ಎಂಬ ಏಕವ್ಯಕ್ತಿ ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು. ಪ್ರತಿಷ್ಠಾನದ ಅಧ್ಯಕ್ಷೆ ಡಿ.ಶೀಲಾ ಕುಮಾರಿ ಇತರರಿದ್ದರು.