

ಶಿವಲಿಂಗಯ್ಯ ಬಿಡಿಎ ಗಾರ್ಡನರ್: ಬೆಂಗಳೂರು ನಗರದ ವಿವಿಧೆಡೆ 4 ಮನೆ, ದೊಡ್ಡಕಲ್ಲಸಂದ್ರದಲ್ಲಿ 1 ಸೈಟು, 510 ಗ್ರಾಂ ಚಿನ್ನ, 700 ಗ್ರಾಂ ಬೆಳ್ಳಿ, ರಾಮನಗರ ಚನ್ನಪಟ್ಟಣ ತಾಲ್ಲೂಕಿನಲ್ಲಿ 1 ಎಕರೆ 9 ಗುಂಟೆ ಕೃಷಿ ಜಮೀನು, 2 ಬೈಕ್, 3 ಕಾರು, 86 ಸಾವಿರ ರೂ. ನಗದು, ಬ್ಯಾಂಕ್ನಲ್ಲಿ 80 ಸಾವಿರ ರೂ., 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.
ತಿಪ್ಪಣ್ಣ ಪಿ. ಸಿರಸಗಿ ಬೀದರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಜಿಲ್ಲಾ ಯೋಜನಾಧಿಕಾರಿ: ಕಲಬುರಗಿ ನಗರದಲ್ಲಿ ವಿವಿಧೆಡೆ 3 ಮನೆ, 255 ಗ್ರಾಂ ಚಿನ್ನ, 1.417 ಕೆಜಿ ಬೆಳ್ಳಿ, ಕಲಬುರಗಿ ವಿವಿಧ ಕಡೆ 4 ಎಕರೆ 19 ಗುಂಟೆ ಕೃಷಿ ಜಮೀನು, 2 ಬೈಕ್, 1 ಕಾರು, 65 ಸಾವಿರ ರೂ.ನ 7 ವಿಮಾ ಪಾಲಿಸಿ, ಬ್ಯಾಂಕ್ನಲ್ಲಿ 9 ಲಕ್ಷ ರೂ., 5 ಲಕ್ಷ ರೂ., 16.70 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು.
ಎ. ಮೋಹನ್ಕುಮಾರ್ ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಇಲಾಖೆ ಇಇ: ನಾಗರಬಾವಿಯಲ್ಲಿ 1 ಮನೆ, ಬೆಂಗಳೂರಿನ ವಿವಿಧೆಡೆ 7 ಸೈಟು, ನಾಗರಬಾವಿ 2ನೇ ಹಂತದಲ್ಲಿ 2 ವಾಣಿಜ್ಯ ಸಂಕೀರ್ಣ, 2.279 ಕೆಜಿ ಚಿನ್ನ, 6.600 ಕೆಜಿ ಬೆಳ್ಳಿ, ಗಾಣಕಲ್ಲು ಗ್ರಾಮದಲ್ಲಿ 1 ಎಕರೆ 19 ಗುಂಟೆ ಕೃಷಿ ಜಮೀನು, 2 ಬೈಕ್, 2 ಕಾರು, 13. 50 ಲಕ್ಷ ರೂ. ನಗದು.
ಹಾರೋಹಳ್ಳಿ: ಭ್ರಷ್ಟಾಚಾರದ ಆರೋಪದ ಮೇರೆಗೆ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿಯ 8 ಅಧಿಕಾರಿಗಳ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ ಶಾಕ್ ನೀಡಿತು. ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಅಗರ ಗ್ರಾಮದ ಬಳಿ ಇರುವ ಕಾರವಾರ ಜಿಲ್ಲಾ ನೋಂದಣಾಧಿಕಾರಿ (ಡಿಆರ್) ಬಿ.ಎಸ್. ಶ್ರೀಧರ್ ಅವರಿಗೆ ಸೇರಿದ ಫಾಮರ್್ಹೌಸ್ ಮೇಲೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದರು.
ಏಕಕಾಲಕ್ಕೆ 4 ಕಡೆ ದಾಳಿ: ರಾಮನಗರದಲ್ಲಿ ಜಿಲ್ಲಾ ನೋಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ನಾಲ್ಕು ತಂಡಗಳಲ್ಲಿ ದಾಳಿ ನಡೆಸಿದ್ದಾರೆ. ಶ್ರೀಧರ್ ಅವರಿಗೆ ಸೇರಿರುವ ಕನಕಪುರ ತಾಲೂಕಿನ ಮರಳವಾಡಿ ಹೋಬಳಿ ಅಗರ ಫಾರಂಹೌಸ್ಗೆ ಕೋಲಾರ ಎಸಿಬಿ ಡಿವೈಎಸ್ಪಿ ಸುಧೀರ್ ನೇತೃತ್ವದ ತಂಡ, ಬೆಂಗಳೂರು ಎಚ್ಎಸ್ಆರ್ ಬಡಾವಣೆಯ ಮನೆ ಮೇಲೆ ರಾಮನಗರ ಎಸಿಬಿ ಡಿವೈಎಸ್ಪಿ ಗೋಪಾಲನ್ ಜೋಗಿನ್ ನೇತೃತ್ವದ ತಂಡ, ನೆಲಮಂಗಲ ತಾಲೂಕಿನ ಶ್ರೀಧರ್ ಅವರ ಹುಟ್ಟೂರು ಮೈಲನಹಳ್ಳಿಗೆ ಇನ್ಸ್ಪೆಕ್ಟರ್ ನೇತೃತ್ವದ ತಂಡ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಾರವಾರದಲ್ಲಿ ಇನ್ಸ್ಪೆಕ್ಟರ್ ನೇತೃತ್ವದ ತಂಡ ಏಕ ಕಾಲದಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ಚರಾಸ್ತಿ, ಸ್ಥಿರಾಸ್ತಿ, ಹಣಕಾಸಿನ ದಾಖಲೆಗಳು ಸೇರಿ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಸುಪರ್ದಿಗೆ ತೆಗೆದುಕೊಂಡಿದೆ. ಅಗರ ಫಾರಂ ಹೌಸ್ ಸೇರಿ ಒಟ್ಟು 75 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಯ ಅಕ್ರಮ ಆಸ್ತಿ ಮಾಡಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ ಎನ್ನಲಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯ ಮನೆಯಲ್ಲಿ 2 ಕಾರು, 2 ಬೈಕ್, 800 ಗ್ರಾಂ ಚಿನ್ನ, 2 ಲಕ್ಷ ರೂ. ಬೆಲೆಬಾಳುವ ನಿವೇಶನ, ಕೋರಮಂಗಲ 7ನೇ ಬ್ಲಾಕ್ನಲ್ಲಿ ನಿರ್ಮಾಣ ಹಂತದಲ್ಲಿರುವ 3 ಅಂತಸ್ತಿನ ಕಟ್ಟಡ, 1.5 ಕೋಟಿ ರೂ. ಜಮೀನು ಹಾಗೂ ಹುಟ್ಟೂರು ಮೈಲನಹಳ್ಳಿಯಲ್ಲಿ ಜಮೀನು ಮತ್ತು ನಿವೇಶನ ಸೇರಿ ಹಲವಾರು ಮಹತ್ವದ ದಾಖಲೆಗಳು ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಲಭ್ಯವಾಗಿವೆ.
ನಾಲ್ಕು ಕಡೆ ದಾಳಿ ನಡೆಸಿದ್ದು, 3.79 ಕೋಟಿ ರೂ. ಬೆಲೆ ಬಾಳುವ ಅಕ್ರಮ ಆಸ್ತಿ ಕಂಡುಬಂದಿದೆ. ನಿವೇಶನ, ಚಿನ್ನ, ಮನೆಗಳು ಸೇರಿ ಹಲವು ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ದಾಖಲೆಗಳು ಸಿಕ್ಕಿವೆ. ದಾಖಲೆಗಳ ಪರಿಶೀಲನೆ ಮುಂದುವರಿದಿದೆ. | ಗೋಪಾಲನ್ ಜೋಗಿನ್ ಎಸಿಬಿ ಡಿವೈಎಸ್ಪಿ ರಾಮನಗರ ದಾಳಿ ತಂಡದ ಮುಖ್ಯಸ್ಥ ಹಾರೋಹಳ್ಳಿಗೆ ಗುರುವಾರ ಸಂಜೆಯೇ ಬಂದು ಉಳಿದುಕೊಂಡಿದ್ದ ಎಸಿಬಿ ಅಧಿಕಾರಿಗಳ ತಂಡ, ಶುಕ್ರವಾರ ಬೆಳಗ್ಗೆಯೇ ದಾಳಿ ನಡೆಸಿದೆ. ನಾಲ್ಕು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸ ಲಾಗಿದ್ದು, ಅಕ್ರಮ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ. | ಸುಧೀರ್ ಎಸಿಬಿ ಡಿವೈಎಸ್ಪಿ, ಕೋಲಾರದಲ್ಲಿ ದಾಳಿ ನಡೆಸಿದ ತಂಡದ ಮುಖ್ಯಸ್ಥ