ಎರಡು ಹಸು‌ಗಳು ಸಾವು

Published on

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಎರಡು ಹಸುಗಳು ಮೃತಪಟ್ಟಿವೆ.

6ನೇ ಬೀದಿ‌ ನಿವಾಸಿ ಜಾರ್ಜ್ ಎಂಬುವರಿಗೆ ಸೇರಿದ ಎರಡು ಜರ್ಸಿ ತಳಿಯ ಹಸುಗಳು ಮಂಗಳವಾರ ಬೆಳಗ್ಗೆ ಸಾವಿಗೀಡಾಗಿವೆ.

ಬೆಳಗ್ಗೆ ಹಾಲು ಕರೆಯುವ ಮುನ್ನ ರಾಸುಗಳಿಗೆ ಅಕ್ಕಿ ನುಚ್ಚಿನ ತಿಂಡಿ ನೀಡಲಾಗಿತ್ತು. ಇದನ್ನು ತಿಂದ 20 ನಿಮಿಷಕ್ಕೆ ಹಸುಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net