ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಆರ್.ವಿ.ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಹೃದಯ್.ಎಸ್.ಗೌಡ ಮತ್ತು ಮೊಹಮ್ಮದ್ ಜಬೀ ರಾಷ್ಟಿçÃಯ ರಕ್ಷಣಾ ಅಕಾಡೆಮಿ (ಎನ್.ಡಿ.ಎ) ಪರೀಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ಹೃದಯ್ ಎಸ್.ಗೌಡ ರವರು ಸಿದ್ಧಾರ್ಥ ಶ್ರೀಕೃಷ್ಣ ಹಾಗೂ ಟಿ.ಸುಮಾ ರವರ ಪುತ್ರ. ಮೊಹಮ್ಮದ್ ಜಬೀ ರವರು ಟಿ.ಎಸ್.ದಾದಾಪೀರ್ ಮತ್ತು ಸಬೀಹಾ ಬಾನು ಪುತ್ರ. ಈ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದಾರೆ. ಇವರಿಂದ ಇನ್ನಷ್ಟು ಸಾಧನೆ ಮೂಡಿಬರಲಿ. ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದು ಇತರರಿಗೆ ಮಾದರಿ ಆಗಲಿ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದ್ದಾರೆ.
ಚಿತ್ರ ೧೪ ಕೆ.ಎಲ್.ಆರ್. ೦೬ : ಹೃದಯ್ ಎಸ್.ಗೌಡ ರವರ ಭಾವಚಿತ್ರ
ಚಿತ್ರ ೧೪ ಕೆ.ಎಲ್.ಆರ್. ೦೬ಎ : ಮೊಹಮ್ಮದ್ ಜಬೀ ರವರ ಭಾವಚಿತ್ರ