ಎದೆಗುಂದದೆ ಪಕ್ಷ ಸಂಘಟಿಸಿ

DSC_0080 copy
Published on

ಯಾದಗಿರಿ: ನಾವು ಅಧಿಕಾರದಲ್ಲಿಲ್ಲ ಎಂದು ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ದೇಶದ ಮತ್ತು ರಾಜ್ಯದ ಜನರಲ್ಲಿ ಕಾಂಗ್ರೆಸ್ ಪಕ್ಷ ಇಂದಿಗೂ ವಿಶ್ವಾಸ ಉಳಿಸಿಕೊಂಡಿದೆ ಎಂದು ಕೆಪಿಸಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಶುಕ್ರವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಯಾದಗಿರಿ ಬ್ಲಾಕ್ ಕಾಂಗ್ರೆಸ್ನ ನೂತನ ಅಧ್ಯಕ್ಷ ಸುದರ್ಶನ ನಾಯಕ್ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೆ ಇರಬಹುದು. ಆದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಮುಂದಿನ ಚುನಾವಣೆಗಳಲ್ಲಿ ಪಕ್ಷ ಮತ್ತೊಮ್ಮೆ ವಿಜಯ ಸಾಧಿಸಲಿದೆ. ಆದರೆ ಕಾರ್ಯಕರ್ತರು ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವುದು ಅತ್ಯಂತ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆದಾಗ ಬೆಂಗಳೂರಿನಲ್ಲಿ ಜೀವನೋಪಾಯಕ್ಕೆ ತೆರಳಿದ ನಮ್ಮ ಭಾಗದ ಕೂಲಿ ಕಾರ್ಮಿಕರಿಗೆ ಮತ್ತೆ ವಾಪಸ್ ತಮ್ಮ ತಮ್ಮ ಊರುಗಳಿಗೆ ಮರಳಲು ಕಾಂಗ್ರೆಸ್ ವ್ಯವಸ್ಥೆ ಮಾಡಿತೇ ವಿನಃ ಬಿಜೆಪಿ ಸರ್ಕಾರವಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು 1 ಕೋಟಿ ರೂ.ಚೆಕ್ ಹಿಡಿದು ಬೆಂಗಳೂರಿನ ಬಸ್ ನಿಲ್ದಾಣಕ್ಕೆ ತೆರಳಿದ ಮೇಲಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ಞಾನೋದಯವಾಗಿ ಜನತೆಗೆ ಬಸ್ ವ್ಯವಸ್ಥೆ ಕಲ್ಪಿಸಿದರು ಎಂದರು.
ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ಪಾಟೀಲ್, ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರು, ನಿರ್ಗಮಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪಗೌಡ ಮಲ್ಹಾರ, ಪ್ರಮುಖರಾದ ಲಾಯಕ್ ಹುಸೇನ್ ಬಾದಲ್, ಎ.ಸಿ.ಕಾಡ್ಲೂರು, ಬಸುರೆಡ್ಡಿ ಬಿಳಾರ, ಸಿದ್ದಲಿಂಗರೆಡ್ಡಿ ಬಿಳ್ಹಾರ, ಶಿವಲಿಂಗಪ್ಪ ಪುಟಗಿ, ವಿಶ್ವನಾಥ್ ನೀಲಳ್ಳಿ, ಹನುಮೇಗೌಡ ಮರಕಲ್, ಕೆಪಿಸಿಸಿ ಯುವ ಕಾರ್ಯದಶರ್ಿ ರಾಘವೇಂದ್ರ ಮಾನಸಗಲ್ ಇದ್ದರು. ಸ್ಯಾಂಸನ್ ಮಾಳಿಕೇರಿ ನಿರೂಪಿಸಿದರು. ಚನ್ನಕೇಶವಗೌಡ ಬಾಣತಿಹಾಳ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net