ಎ.ಪಿ.ಎಂ.ಸಿ. ಮಾರುಕಟ್ಟೆಯ ಟಮೇಟೋ ಮಂಡಿ ಬೆಂಕಿ ಅವಘಡ / ಒಂದು ಲಕ್ಷ ಮೌಲ್ಯದ ಕ್ರೇಟುಗಳು ಭಸ್ಮ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದ ಎ.ಪಿ.ಎಂ.ಸಿ. ಮಾರುಕಟ್ಟೆಯ ಮಂಡಿಯೊAದರಲ್ಲಿ ಆಕಸ್ಮಿಕ ಬೆಂಕಕಿ ಅವಘಡ ಸಂಭವಿಸಿದ್ದು, ಸುಮಾರು ೦೧ ಲಕ್ಷ ಮೌಲ್ಯದ ನೂರು ಟಮೋಟೋ ಕ್ರೇಟುಗಳು ಬೆಂಕಿಗೆ ಆಹುತಿಯಾಗಿವೆ.

ಸೋಮಣ್ಣ ಎಂಬುವವರಿಗೆ ಸೇರಿದ ಮಂಡಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ಮಂಡಿಯಲ್ಲಿದ್ದ ಟಮೇಟೋ ಕ್ರೇಟುಗಳು ಬೆಂಕಿಗೆ ಆಹುತಿಯಾಗಿವೆ.

ಅಗ್ನಿಶಾಮಕ ಧಳದವರು ಸಕಾಲಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ. ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಚಿತ್ರ ೨೨ ಕೆ.ಎಲ್.ಆರ್. ೧೦ : ಟಮೇಟೋ ಮಾರುಕಟ್ಟೆಯ ಮಂಡಿಯಲ್ಲಿ ಬೆಂಕಿಗೆ ಆಹುತಿಯಾಗಿರುವ ಟಮೇಟೋ ಕ್ರೇಟುಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net