

ನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್‌ಐಇ) ದೇಶದ ಅಗ್ರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿದ್ದು, ಮೌಲ್ಯಾಧಾರಿತ ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.
ಇದೀಗ ಎನ್‌ಐಇನ ಉತ್ತರ ಕ್ಯಾಂಪಸ್‌ನಲ್ಲಿ ಬುಧವಾರ ಎ.ಐ. ಆಧಾರಿತ ಆಲ್ಫಾ (ಅಡ್ವಾನ್ಸ್ಡ್ ಲ್ಯಾಬೊರೇಟರಿ ಫಾರ್ ಪ್ರೋಗ್ರಾಮಿಂಗ್, ಹಾರ್ಡ್ವೇರ್ ಆ್ಯಂಡ್ ಅನಾಲಿಟಿಕ್ಸ್) ಇನ್ನೋವೇಷನ್ ಆ್ಯಂಡ್ ಟಿಂಕರ್ಸ್ ಪ್ರಯೋಗಾಲಯಗಳನ್ನು ಉದ್ಘಾಟಿಸಲಾಯಿತು. ನಗರದ ಕೂರ್ಗಳ್ಳಿ ರಸ್ತೆಯಲ್ಲಿರು ಎನ್‌ಐಇ ಉತ್ತರ ಕ್ಯಾಂಪಸ್‌ನಲ್ಲಿ ಮೇಕರ್ ಭವನ ಫೌಂಡೇಶನ್(ಎಂಬಿಎಫ್), ಲೆನೊವೊ ಮತ್ತು ಮೋಟೊರೋಲಾ ಸಂಸ್ಥೆಗಳ ಸಹಯೋಗದಲ್ಲಿ ಆಲ್ಫಾ ಹಾಗೂ ಟಿಂಕರ್ಸ್ ಅವಳಿ ಪ್ರಯೋಗಾಲಯಗಳು ಉದ್ಘಾಟನೆಗೊಂಡವು. ಸದರಿ ಪ್ರಯೋಗಾಲಯವು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎ.ಐ., ಎಲ್‌ಒಟಿ, ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್(ಎಚ್‌ಪಿಸಿ) ಮತ್ತು ಡಿಜಿಟಲ್ ಫ್ಯಾಬ್ರಿಕೇಶನ್ ಕ್ಷೇತ್ರಗಳಲ್ಲಿ ಜ್ಞಾನ ಬೆಳೆಸಲು ಸಹಕಾರಿಯಾಗಿದೆ. ದಿನದ 24 ತಾಸು ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ಇರಲಿದೆ.
ಟಿಂಕರರ್ಸ್ ಪ್ರಯೋಗಾಲಯವನ್ನು ಉದ್ಘಾಟಿಸಿದ ಲೆನೊವೊ ಇಂಡಿಯಾ ಉಪಾಧ್ಯಕ್ಷ ಶೈಲೇಂದ್ರ ಕಟ್ಯಾಲ್ ಮಾತನಾಡಿ, ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸಿಸ್ಟಂಗಳು ಮತ್ತು ಎಲೆಕ್ಟ್ರೋ ಮೆಕ್ಯಾನಿಕಲ್ ಪ್ರೋಟೋಟೈಪಿಂಗ್ ಉಪಕರಣಗಳನ್ನು ಒಟ್ಟಿಗೆ ಹೊಂದಿರುವ ಈ ಪ್ರಯೋಗಾಲಯವು ರಾಜ್ಯದ ಮೊದಲ ಅತ್ಯುನ್ನತ್ತ ಪ್ರಯೋಗಾಲಯವಾಗಿದೆ. ಜತೆಗೆ ತಾಂತ್ರಿಕ ಪ್ರಾಯೋಗಿಕ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಸ್ವಯಂ ಚಾಲಿತ ಶಕ್ತಿಯಕ್ತಿಯನ್ನು ಹೊಂದಿರುವ ವಿಶಿಷ್ಟ ಪ್ರಯೋಗಾಲಯವಾಗಿದೆ ಎಂದರು.
ಸದರಿ ಪ್ರಯೋಗಾಲಯವು ವಿದ್ಯಾರ್ಥಿಗಳಿಗೆ ಅಪಾರ ಜ್ಞಾನ ನೀಡಲಿದ್ದು, ವಿದ್ಯಾರ್ಥಿಗಳ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಐಐಟಿ ಪ್ರಾಧ್ಯಾಪಕ ಪ್ರೊ.ಟಿವೋಥಿ ಎ.ಗೊನ್ಸಾಲ್ವೆಸ್ ಇನ್ನೋವೇಷನ್ ಪ್ರಯೋಗಾಲಯ ಉದ್ಘಾಟಿಸಿದರು. ಮೇಕರ್ ಭವನ್ ಫೌಂಡೇಶನ್‌ನ ಸಿಇಒ ದಮಯಂತಿ ಭಟ್ಟಾಚಾರ್ಯ, ಪ್ರಾಂಶುಪಾಲರಾದ ಡಾ. ರೋಹಿಣಿ ನಾಗಪದ್ಮ, ಆಲ್ಪಾ ಯೋಜನಾ ಮುಖ್ಯಸ್ಥ ಪ್ರೊ. ವಿ. ಬಾಲಾಜಿ, ಎನ್‌ಐಇ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಬಿ. ಉದಯಶಂಕರ್ ಇತರರಿದ್ದರು.