ಉಮಾಕೇಶವ್ ಪಪಂ ಪ್ರಭಾರ ಅಧ್ಯಕ್ಷೆ

17 nrp 3 gp
ಎನ್.ಆರ್.ಪುರ ಪಪಂ ಪ್ರಭಾರ ಅಧ್ಯಕ್ಷೆಯಾಗಿ ಉಮಾಕೇಶವ್ ಆಯ್ಕೆಯಾದರು. ಪ್ರಶಾಂತ್ ಎಲ್.ಶೆಟ್ಟಿ, ಜುಬೇದಾ, ಆರ್.ಕುಮಾರಸ್ವಾಮಿ, ಸುರಯ್ಯಬಾನು, ಶೋಜಾ, ಮುಕುಂದ, ಮುನಾವರ್ ಪಾಷ ಇದ್ದರು.
Published on

ಎನ್.ಆರ್.ಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷೆಯಾಗಿ, ಉಪಾಧ್ಯಕ್ಷೆ ಉಮಾಕೇಶವ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ಪಪಂಯ ಆಡಳಿತ ಮಂಡಳಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಸುರಯ್ಯಬಾನು ಅವರು ಅಧಿಕಾರ ಸ್ವೀಕರಿಸಿದ್ದರು. ಪಕ್ಷದ ಆಂತರಿಕ ಒಪ್ಪಂದದಂತೆ ಇವರ 6 ತಿಂಗಳ ಅವಧಿ ಪೂರ್ಣಗೊಂಡು ರಾಜೀನಾಮೆ ನೀಡಿದ್ದು ಅದು ಅಂಗೀಕಾರವಾಗಿದೆ. ಮುಂದೆ ಅಧ್ಯಕ್ಷರ ಚುನಾವಣೆ ನಡೆಯುವವರೆಗೆ ಉಮಾಕೇಶ್ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಅಧ್ಯಕ್ಷರಾಗಿ ಜುಬೇದಾ ಆಯ್ಕೆಯಾಗಿದ್ದು ಚುನಾವಣೆ ಬಳಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಭಾರ ಅಧ್ಯಕ್ಷೆಯಾಗಿ ಆಯ್ಕೆಯಾದ ಉಮಾಕೇಶವ್ ಅವರಿಗೆ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯರಾದ

ಸುರಯ್ಯಬಾನು, ಶೋಜಾ, ಆರ್.ಕುಮಾರಸ್ವಾಮಿ, ಮುಕುಂದ, ಜುಬೇದಾ, ಮುನಾವರ ಪಾಷ, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಸಮುದಾಯ ಸಂಘಟನಾ ಅಧಿಕಾರಿ ಲಕ್ಷ್ಮಣೇಗೌಡ, ಕಂದಾಯ ನಿರೀಕ್ಷಕ ವಿಜಯಕುಮಾರ್ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net