ಉನ್ನತ ಶಿಕ್ಷಣದಿಂದ ಉಜ್ವಲ ಭವಿಷ್ಯ

17MDG3 honour
ಮೂಡಿಗೆರೆಯಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಡೆದ ಕಾರ್ಯಕ್ರಮದಲ್ಲಿ ಆರ್.ಜೆ.ನಯನಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾಜಲಕ್ಷ್ಮೀ ಕಾಂತರಾಜ್, ಡಾ. ಮೋಹನ್ ರಾಜಣ್ಣ, ಗೀತಾ, ಜಗತ್, ಅನಸೂಯಾ, ಉಮಾ ಮೋಹನ್, ಶಕುಂತಲಾ ಪಾಟೀಲ್ ಇತರರಿದ್ದರು.
Published on

ಮೂಡಿಗೆರೆ: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಉನ್ನತ ಸಾಧನೆ ಸಾಧ್ಯ. ಶಿಕ್ಷಣದಿಂದ ಯಾರೊಬ್ಬರೂ ವಂಚಿತರಾಗಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಾಜಲಕ್ಷ್ಮೀ ಕಾಂತರಾಜ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜೇಸಿಐ ಹೊಯ್ಸಳದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಜ್ಞಾನಪುಷ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕೇವಲ ಪುಸ್ತಕದ ಪಾಠವಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಪ್ರಮುಖ ಘಟ್ಟ ಎಂದು ತಿಳಿಸಿದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಆತ್ಮವಿಶ್ವಾಸ ಬಹುಮುಖ್ಯವಾಗಿದೆ. ವಿವೇಚನೆ, ವಿವೇಕ, ಶೈಕ್ಷಣಿಕ ಗೆಲುವಿನ ಹಾದಿಯಾಗಿದೆ. ಗುರುಹಿರಿಯರ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಮುನ್ನಡೆದರೆ ಗೆಲುವು ಸಿಗಲಿದೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ, ಮಂಗಳೂರಿನ ರೇಡಿಯೋ ಜಾಕಿ ಆರ್.ಜೆ.ನಯನಾ ಶೆಟ್ಟಿ, ಹೊಯ್ಸಳ ಜೆಸಿಐ ಅಧ್ಯಕ್ಷ ಬಿ.ಎಂ.ಜಗತ್, ಮುಖ್ಯಶಿಕ್ಷಕಿ ಅನಸೂಯಾ, ಶಕುಂತಲಾ ಪಾಟೀಲ್, ಟ್ರಸ್ಟ್ ಅಧ್ಯಕ್ಷೆ ಉಮಾ ಮೋಹನ್, ಸಿ.ಸಿ.ರಾಜಣ್ಣ, ನಳಿನಾ, ಎಂ.ಕೆ.ಗಣೇಶ್, ಬಕ್ಕಿ ಮಂಜು, ಚಂದ್ರು ಒಡೆಯರ್, ಹಸೈನಾರ್, ಸಿ.ಎಸ್.ಚಂದ್ರಶೇಖರ್, ಶಿಕ್ಷಕರಾದ ತೋಟಪ್ಪ ಗೌಡ, ವೆಂಕಟೇಶ್, ಯೋಗೇಶ್, ಸುನೀತಾ, ವರ್ಷಿತಾ, ವಿದ್ಯಾ, ರೇಷ್ಮಾ ಬಾನು, ಈಶನಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net