ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಗೆಲ್ಲಿಸಿ

WhatsApp Image 2023-04-27 at 3.45.03 PM - Copy
Published on

ರಾವಂದೂರು: ಗ್ರಾಮೀಣ ಜನರ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ವೆಂಕಟೇಶ್ ಹೇಳಿದರು.


ರಾವಂದೂರು ಹೊಸಹಳ್ಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜನಪರ ಆಡಳಿತದಿಂದ ಕಟ್ಟಕಡೆಯ ಮನುಷ್ಯನವರೆವಿಗೂ ಮೂಲಸೌಲಭ್ಯಗಳು ಲಭ್ಯವಾಗಿವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ರಾಮೀಣ ಜನರು ಉತ್ತಮ ಬದುಕು ನಡೆಸಲು ಸಂಕಷ್ಟಕ್ಕೆ ಒಳಗಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬದುಕು ನಡೆಸಲು ಶೋಚನೀಯ ಸ್ಥಿತಿಗೆ ತಲುಪಿದ್ದಾರೆ ಎಂದು ಟೀಕಿಸಿದರು.


ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಚ್.ಡಿ.ಗಣೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಮೂಲಕ ತಾಲೂಕಿನ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಚಿಕ್ಕವೀರಪ್ಪ, ಮುಖಂಡರಾದ ಹೊಲದಪ್ಪ, ಕುರುಬರ ಸಂಘದ ಕಾರ್ಯದರ್ಶಿ ಸುನೀಲ್, ಕೆ.ಎ.ನಾಗರಾಜು, ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್.ಎಸ್.ವಿಜಯ್‌ಕುಮಾರ್, ಆರ್.ಎಸ್.ಮಹೇಶ್, ಆರ್.ಎಸ್.ದೊಡ್ಡಣ್ಣ, ಕೀರ್ತಿ, ನಂದೀಶ್, ಮಂಜುನಾಥ್, ನೀಲಕಂಠ, ಜಯಣ್ಣ, ಕೇಶವಮೂರ್ತಿ, ಗೋಪಾಲಸ್ವಾಮಿ, ರಾಮೇಗೌಡ, ಅರ್ಜುನ್‌ಪಟೇಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net