ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

bright future
ಬೀರೂರಿನ ಬ್ರೈಟ್ ್ಯೂಚರ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ಮತ್ತು ಸದಸ್ಯರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
Published on

ಬೀರೂರು: ಚಿಕ್ಕಮಗಳೂರು ಜಿಪಂ ಉಪನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆಯಿಂದ ಸಂಗಮೇಶ್ವರಪೇಟೆಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ 2023-24ನೇ ಸಾಲಿನ ನೇರ ಕ್ರೀಡಾಕೂಟ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಬ್ರೈಟ್ ್ಯೂಚರ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕ್ರಮುಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಬಿ.ಜಿ.ಮನಿಶ್ 50 ಮೀ ಮತ್ತು 100 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 50 ಮೀ ಫ್ರೀಸ್ಟೈಲ್‌ನಲ್ಲಿ (ದ್ವಿ), ಎಚ್.ಆರ್.ಜೀವನ್ 100 ಹಾಗೂ 50 ಮೀ ಫ್ರೀಸ್ಟೈಲ್‌ನಲ್ಲಿ (ದ್ವಿ), ರವಿಕುಮಾರ್ 50 ಮೀ ಫ್ರೀಸ್ಟೈಲ್‌ನಲ್ಲಿ (ದ್ವಿ), ಕೆ.ಎಸ್.ಕಿಶೋರ್ ಪಾಟೀಲ್ 100 ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ (ಪ್ರ).
ಬಾಲಕಿಯರ ವಿಭಾಗದಲ್ಲಿ ಬಿ.ವಿ.ಶರ್ವಾಣಿ 50 ಮೀ ಮತ್ತು 100 ಮೀ ಬ್ರೆತ್ ಸ್ಟ್ರೋಕ್‌ನಲ್ಲಿ (ಪ್ರ), 100 ಮೀ ರಿಲೆಯಲ್ಲಿ (ಪ್ರ) ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್‌ಷಿಪ್‌ಗೆ ಭಾಜನರಾಗಿದ್ದಾರೆ. ಜಿ.ಆರ್.ಗ್ರಿಶ್ಮಾ ಮತ್ತು ಗೌತಮಿ 100 ಮೀ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ, ಪ್ರಧಾನ ಕಾರ್ಯದರ್ಶಿ ಸಿ.ವಿ.ನಾಗೇಂದ್ರ ಶ್ರೇಷ್ಠಿ, ಕ್ರೀಡಾ ಕಾರ್ಯದರ್ಶಿ ಎಸ್.ಎಸ್.ದೇವರಾಜ್, ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net